ನ್ಯೂಸ್

ಹೊಸ ಆವಿಷ್ಕಾರದಿಂದ ವಿದ್ಯುತ್ ಚಾಲಿತ ವಾಹನ ಕ್ಷೇತ್ರದ ದಿಕ್ಕು ಬದಲಾವಣೆ

ಬೆಂಗಳೂರು: ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವ ನೂತನ ವಿದ್ಯುತ್ ಚಾಲಿತ ವಾಹನಗಳು ಈ ಕ್ಷೇತ್ರದ ದಿಕ್ಕನ್ನೇ ಬದಲಾಯಿಸಲಿವೆ ಎಂದು ಇಸ್ರೋ ನಿವೃತ್ತ ನಿರ್ದೇಶಕ ಡಾ.ಮಹಿಲ್ ಸ್ವಾಮಿ ಅಣ್ಣಾ ದೊರೈ ಅಭಿಪ್ರಾಯಪಟ್ಟಿದ್ದಾರೆ.

ಸಿ.ಕೆ.ಮೋಟಾರ್ಸ್ ವತಿಯಿಂದ ನಾಗರಬಾವಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಎಲೆಕ್ಟ್ರಿಕ್ ಸ್ಕೂಟರ್, ಬೈಸಿಕಲ್, ಸೂಪರ್ ಸ್ಪೀಡ್ ಬೈಕ್ ಹಾಗೂ ತ್ರಿಚಕ್ರ ವಾಹನಗಳನ್ನು ಅನಾವರಣಗೊಳಿಸಿ ಮಾತನಾಡಿದರು. 120 ಕಿ.ಮೀ. ವೇಗದಲ್ಲಿ ಚಲಾಯಿಸಬಹುದಾದ ಎಲೆಕ್ಟ್ರಿಕ್ ಸೂಪರ್ ಬೈಕ್ ಬಗ್ಗೆ ಪ್ರಶಂಸಿದರು.

ವಿವಿಧ ಮಾದರಿಯ ವಿದ್ಯುತ್ ಚಾಲಿತ ವಾಹನಗಳು ಬಂದಿವೆ. ಗ್ರಾಹಕರು ತಮಗೆ ಬೇಕಾದ ರೀತಿಯಲ್ಲಿ ಕಸ್ಟಮೈಸೇಷನ್ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತಿವೆ. ಇಂತಹ ಹೊಸ ಆವಿಷ್ಕಾರಗಳಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದ ದಿಕ್ಕನ್ನೇ ಬದಲಾಗಲಿದೆ. ಲೀಥೀಯಂ ಅಯಾನ್ ಬ್ಯಾಟರಿ ಬದಲಾಗಿ ಉಪಗ್ರಹ ಉಡಾವಣೆಯಲ್ಲಿ ಬಳಸುವ ಫ್ಯೂಯಲ್ ಸೆಲ್‌ಗಳನ್ನು ವಾಹನಗಳಲ್ಲಿ ಅಳವಡಿಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಸಿ.ಕೆ.ಮೋಟಾರ್ಸ್ ಕಂಪನಿಯಲ್ಲಿ ಇಂತಹ ಸಂಶೋಧನೆ ಹಾಗೂ ಅಭಿವೃದ್ದಿಗಳು ನಡೆಯತ್ತಿವೆ. ಉಪಗ್ರಹಗಳಲ್ಲಿ ಬಳಸುತ್ತಿರುವ ತಂತ್ರಜ್ಞಾನ ವಾಹನಗಳಲ್ಲೂ ಬಳಸುವ ಸಮಯ ಶೀಘ್ರದಲ್ಲೇ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಿ.ಕೆ.ಮೋಟಾರ್ಸ್ ಕಂಪನಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ದೇಶದಲ್ಲಿರುವ ಪ್ರಮುಖ ಎಲೆಕ್ಟ್ರಿಕ್ ಆಟೋಮೋಬೈಲ್ ಕಂಪನಿಗಳ ಜತೆ ಸಹಭಾಗಿತ್ವ ಮಾಡಿಕೊಂಡು ದೇಶಾದ್ಯಂತ ಬಹು ವಿಭಾಗೀಯ ಎಲೆಕ್ಟ್ರಿಕ್ ವಾಹನಗಳ ಮಳಿಗೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.