ನ್ಯೂಸ್

ಹೊಳೆನರಸೀಪುರದಲ್ಲಿ ಹತ್ತಿ ಗೋದಾಮಿನಲ್ಲಿ ಅಗ್ನಿ ಅವಘಡ, ಲಕ್ಷಾಂತರ ಮೌಲ್ಯದ ಹತ್ತಿ ಭಸ್ಮ

ಹೊಳೆನರಸೀಪುರ : ಪಟ್ಟಣದ ಕುವೆಂಪು ರಸ್ತೆಯಲ್ಲಿನ ಹತ್ತಿ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ‌ ಸಂಭವಿಸಿದ್ದು ಲಕ್ಷಾಂತರ ರೂ. ಮೌಲ್ಯದ ಹತ್ತಿ ಬೆಂಕಿಗೆ ಆಹುತಿಯಾಗಿದ್ದು, ಕಾರ್ಮಿಕನೊಬ್ಬ ಗಾಯಗೊಂಡಿದ್ದಾನೆ.

ದಾದಾ ಬುಡೇನ್ ಬೆಡ್ಡಿಂಗ್ ಅಂಗಡಿ ಮಾಲೀಕರಿಗೆ ಸೇರಿದ ಗೋದಾಮಿನಲ್ಲಿ ಬುಧವಾರ ಮುಂಜಾನೆ 5.30 ರ ಸಮಯದಲ್ಲಿ ಬೆಂಕಿ ಅನಾಹುತ ನಡೆದಿದೆ.

ಅಂಗಡಿಯ ಮಾಲೀಕ ಶೇಕ್ ಮೋಹಿದೀನ್ ಬೇರೆ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಕಾರ್ಮಿಕ ಖಲಂದರ್ ಬೆಂಕಿ ನಂದಿಸುವ ಯತ್ನದಲ್ಲಿ ಗಾಯಗೊಂಡಿದ್ದಾರೆ.

ಅಗ್ನಿ ಶಾಮಕ ಠಾಣೆಯ ಬಿಎಸ್ಸೆನ್ನೆಲ್ ಫೋನ್ ಕೆಟ್ಟಿದ್ದರಿಂದ ಪ್ರತ್ಯಕ್ಷದರ್ಶಿ ಯೊಬ್ಬರು ಅಗ್ನಿಶಾಮಕ ಠಾಣೆಗೆ ಹೋಗಿ, ಮಾಹಿತಿ ನೀಡಿದ ನಂತರ ಬೆಂಕಿ ನಂದಿಸಲು ಅಗ್ನಿಶಾಮಕ ವಾಹನ ಆಗಮಿಸಿತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.