ಹನಗೋಡು: ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಯೋಜನೆ, ಹಾರಂಗಿ ಹಾಗೂ ಕೆಆರ್‌ಐಡಿಎಲ್ ಇಲಾಖೆ ವತಿಯಿಂದ 88.50 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು.
ಹನಗೋಡು ಹೋಬಳಿಯ ಹೈರಿಗೆ ಗ್ರಾಮದಲ್ಲಿ ಆರ್‌ಡಿಪಿಆರ್ ಇಲಾಖೆಯ ಯೋಜನೆಯಡಿ 33 ಲಕ್ಷ ರೂ., ಮಲೆನಾಡು ಅಭಿವೃದ್ಧಿ ಯೋಜನೆ ವತಿಯಿಂದ 5 ಲಕ್ಷ ರೂ., ಹಾರಂಗಿ ಇಲಾಖೆ ವತಿಯಿಂದ 20 ಲಕ್ಷ ರೂ., ಕಲ್‌ಬೆಟ್ಟ ಗ್ರಾಮಕ್ಕೆ ಮಲೆನಾಡು ಪ್ರದೇಶ ಅಭಿವೃದ್ಧಿ ಯೋಜನೆಯಡಿ 12 ಲಕ್ಷ ರೂ., ಕಲ್ಕಡ ಗ್ರಾಮಕ್ಕೆ 15.50 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪರಿಮಿತಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಹೈರಿಗೆ ಗ್ರಾಮದ ಜನತೆಯ ಬಹುದಿನಗಳ ಬೇಡಿಕೆಯಂತೆ ಗ್ರಾಮದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಗ್ರಾಮದ ಕನಕಭವನ ಅಪೂರ್ಣಗೊಂಡಿದ್ದು, ಕೂಡಲೇ ಗ್ರಾಮದ ಯಜಮಾನರು ಜವಾಬ್ದಾರಿ ತೆಗೆದುಕೊಳ್ಳಿ. ನಾನು ಕೂಡ ವೈಯಕ್ತಿಕವಾಗಿ ಸಂರ್ಪೂಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕಾಮಗಾರಿಯಲ್ಲಿ ಲೋಪ ಕಂಡುಬಂದಲ್ಲಿ ಗ್ರಾಮದ ಮುಖಂಡರು, ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ತಿಳಿಸಿದರು.
ತಟ್ಟೆಕೆರೆ ಗ್ರಾಪಂ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ಗೋವಿಂದೇಗೌಡ, ಸಣ್ಣಮ್ಮ, ನವೀನ್‌ಕುಮಾರ್, ಚಂದ್ರು, ಸಿದ್ದಿಕ್, ರಾಜೇಗೌಡ, ಕುಮಾರ್, ಅಶೋಕ್, ಕಗ್ಲಿನಾಯಕ್ ಆನಂದ್, ರಾಜು, ಕಲ್ಕುಣಿಕೆ ರಾಘು ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.