ನ್ಯೂಸ್

ಹೈನೋದ್ಯಮಕ್ಕೆ ಸರ್ಕಾರದ ಪ್ರೋತ್ಸಾಹ

ತಾಲೂಕಿನ ವರುಣ ಹೋಬಳಿಯ ಮೂಡಲಹುಂಡಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿ, ರಾಜ್ಯ ಸರ್ಕಾರ ಹೈನೋದ್ಯಮ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ಅದರಲ್ಲೂ ಹಾಲಿನ ದರದಲ್ಲಿ ಬರುವ ಲಾಭಾಂಶದಲ್ಲಿ ಹೆಚ್ಚಿನ ಭಾಗವನ್ನು ರೈತರಿಗೆ ನೀಡುವ ಮೂಲಕ ಹೈನೋದ್ಯಮವನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತದೆ. ಜತೆಗೆ ಸಿಎಂ ಸಿದ್ದರಾಮಯ್ಯ ಅವರ ಸಹಕಾರದಿಂದ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಹೇಳಿದರು.

ಮೈಸೂರು ಹಾಲು ಒಕ್ಕೂಟಗಳ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಆರ್. ಚೆಲುವರಾಜ್, ನಿರ್ದೇಶಕರಾದ ಕೆ.ಉಮಾಶಂಕರ, ಲೀಲಾ ಬಿ.ಕೆ. ನಾಗರಾಜ್, ಬಿ.ಗುರುಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ, ಪಿ ಅಂಡ್ ಐ ವ್ಯವಸ್ಥಾಪಕ ಕರಿಬಸವರಾಜ್, ಮೂಡಲಹುಂಡಿ ರವಿಕುಮಾರ್, ಸಂಘದ ಅಧ್ಯಕ್ಷ ಎಂ.ಮುದ್ದು ಬಸವ, ವಿಸ್ತರಣಾಧಿಕಾರಿ ಡಾ.ಎಂ.ಪರಮೇಶ್, ಡಾ. ಶಿವಕುಮಾರ್, ರಮ್ಯಶ್ರೀ, ಮೇಘನಾ, ಮೈಮುಲ್ ತಾಲೂಕು ಮೇಲ್ವಿಚಾರಕ ಎಸ್.ಸಂತೋಷ್ ಕುಮಾರ್, ಸಂಘದ ಉಪಾಧ್ಯಕ್ಷ ಎಂ.ಮಹದೇವಸ್ವಾಮಿ, ಎಂ.ಟಿ.ರವಿಕುಮಾರ್, ಸಾಕಪ್ಪ, ಎಂ.ರಾಜು, ಮಾಕಣ್ಣ, ಎಸ್.ಮಹದೇವಸ್ವಾಮಿ, ಕೆ.ಬಸವರಾಜು, ನವೀನ ಕುಮಾರಿ, ಭಾಗ್ಯಾ ಇತರರಿದ್ದರು.