ನ್ಯೂಸ್

ಹೈನುಗಾರರು ಶುದ್ಧ ಹಾಲು ಪೂರೈಸಿ

ಕಿಕ್ಕೇರಿ ಹೋಬಳಿ ಸಾಸಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮನ್ಮುಲ್ ನಿರ್ದೇಶಕ ಡಾಲು ರವಿ, ಗುರುರಾಜ್ ಸುರಗಿಹಳ್ಳಿ, ಮಲ್ಲಿಕಾರ್ಜುನ, ಉಮೇಶ್ ಮತ್ತಿತರರಿದ್ದರು.

ಕಿಕ್ಕೇರಿ: ಜನತೆಯ ಆರೋಗ್ಯ ನಮ್ಮ ಕೈಯಲ್ಲಿದ್ದು, ಹೈನುಗಾರರು ಡೇರಿಗೆ ಶುದ್ಧ ಹಾಲು ಪೂರೈಸಬೇಕು ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು.

ಹೋಬಳಿಯ ಸಾಸಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ದೇಶದಲ್ಲೇ ಅತಿ ಹೆಚ್ಚು ಹಾಲು ಸರಬರಾಜು ಮಾಡುವ ರಾಜ್ಯದಲ್ಲಿ 2ನೇ ಸ್ಥಾನ ಕರ್ನಾಟಕದ್ದು. ಪ್ರತಿ ಮನೆಯಲ್ಲಿ ರಾಸುಗಳು ಇರುವುದು ಸ್ವಾವಲಂಬನೆಗೆ ಸಹಕಾರಿಯಾಗಿದೆ. ರೈತ ಕಲ್ಯಾಣ ಟ್ರಸ್ಟ್‌ನಿಂದ 1 ಲಕ್ಷ ರೂ.ಜೀವ ವಿಮೆ ಇದ್ದು ರಾಸುಗಳಿಗೆ ವಿಮೆ ಮಾಡಿಸಿ ಎಂದು ಸಲಹೆ ನೀಡಿದರು.

ಮಾರ್ಗ ವಿಸ್ತರಣಾಧಿಕಾರಿ ಗುರುರಾಜ್ ಸುರಗಿಹಳ್ಳಿ, ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ಉಮೇಶ್, ನಿರ್ದೇಶಕರಾದ ರಮೇಶ್, ಮಾದಪ್ಪ, ಈರಪ್ಪ, ಲಿಂಗಪ್ಪ, ಮಾದಪ್ಪ, ರಾಜೇಂದ್ರ, ಮಹದೇವಮ್ಮ, ಸುಗುಣ, ಮಾಯಮ್ಮ, ರಾಮಮ್ಮ, ಕಾರ್ಯದರ್ಶಿ ನಾಗೇಶ್, ನಂಜುಂಡಪ್ಪ, ರಾಜೇಶ್, ವೀರಪ್ಪ ಮತ್ತಿತರರಿದ್ದರು.