ನ್ಯೂಸ್

ಹೈ-ಎನರ್ಜಿ ಇಂಟರ್-ಕಾಲೇಜು ಹ್ಯಾಕಥಾನ್

ಮೈಸೂರು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಆರ್‌ಐಟಿ) ಕಾಲೇಜಿನಲ್ಲಿ ಶುಕ್ರವಾರ ‘ಹೈ-ಎನರ್ಜಿ ಇಂಟರ್-ಕಾಲೇಜು ಹ್ಯಾಕಥಾನ್’ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಗರದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಎಂಆರ್‌ಟಿಐ ಕಾರ್ಯದರ್ಶಿ ನಂದಿನಿ ಮೂರ್ತಿ, ಖಜಾಂಚಿ ಡಾ.ಎಲ್.ರಾಮಲಿಂಗಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಎಲ್ಲರಿಗೂ ಶುಭಾ ಹಾರೈಸಿದರು. ಹೊಸ ಹೊಸ ತಂತ್ರಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೀನ್ಯತೆಗಳ ಬಗ್ಗೆ ತಿಳಿಸಿದರು.

ಪ್ರಾಂಶುಪಾಲ ಡಾ.ಡಿ.ಜೆ.ರವಿ, ಉಪ ಪ್ರಾಂಶುಪಾಲ ಡಾ. ಕೆ.ಎಸ್.ಅಭಿನಂದನ್, ಸಿಎಸ್‌ಇ ಮತ್ತು ಅಲೈಡ್ ಶಾಖೆಗಳ ಮುಖ್ಯಸ್ಥರಾದ ಡಾ.ಲಕ್ಷ್ಮಿ ದುರ್ಗಾ ಇತರರಿದ್ದರು.

ಎಲ್ಲರೂ ಗಮನಾರ್ಹ ಸೃಜನಶೀಲತೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಪ್ರದರ್ಶಿಸಿದರು. ಹಲವಾರು ಯೋಜನೆಗಳು ನೈಜ-ಪ್ರಪಂಚದ ಪ್ರಭಾವದ ಸಾಮರ್ಥ್ಯವನ್ನು ಪ್ರದರ್ಶಿಸಿದವು.

ಅತ್ಯುತ್ತಮ ಪ್ರದರ್ಶನ ನೀಡಿದ ಮೈಸೂರಿನ ಜಿಎಸ್‌ಎಸ್‌ಎಸ್‌ಐಇಟಿಡಬ್ಲುೃ ತಂಡ ಪ್ರಥಮ ಬಹುಮಾನ (15000 ರೂ.) ಪಡೆದರೆ, ಎಂಆರ್‌ಐಟಿ ತಂಡ ದ್ವಿತೀಯ ಬಹುಮಾನ(10000 ರೂ.) ಪಡೆಯಿತು. ಅಂತೆಯೇ ಎಟಿಎಂಇ, ಎಂವೈಸಿಇಎಂ, ವಿವಿಸಿಇ ತಂಡಗಳು ಸಮಾಧಾನಕರ ಬಹುಮಾನ(2000 ರೂ.) ಪಡೆದವು.