ಹೊಳೆನರಸೀಪುರ: ಮೈಸೂರು ದಸರಾದಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಹೃದಯಾಘಾತದಿಂದ ತಾಲೂಕಿನ ಆಗ್ರಹಾರ ಗೇಟ್ ಸಮೀಪದ ಚಿತ್ತನಕೊಪ್ಪಲು ಗ್ರಾಮದ ನಿವಾಸಿ, ಗೃಹರಕ್ಷಕ ದಳದ ಜಿ.ನರಸಿಂಹ (35) ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ. ಸ್ವಗ್ರಾಮ ಚಿತ್ತನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.