ನ್ಯೂಸ್

ಹೂವಿನ ಹಡಗಲಿಯಲ್ಲಿ ಎಸಿಬಿ ಟ್ರ್ಯಾಪ್

ಹೂವಿನ ಹಡಗಲಿ( ಬಳ್ಳಾರಿ):ಟ್ರಾನ್ಸ್ಫಾರ್ಮರ್ ಹಾಕಿಕೊಡಲು 20 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಜೆಸ್ಕಾಂ ಎಇಇ ಮತ್ತು ಲೈನ್ಮನನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಲೆಗೆ ಕೆಡವಿದ್ದಾರೆ.
ಜೆಸ್ಕಾಂ ಎಇಇ ಭಾಸ್ಕರ್ ರಾವ್, ಲೈನ್ಮನ್ ಮಾರುತಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬಸರಹಳ್ಳಿಯ ರೈತ ಗೌಡ್ರ ಉಮೇಶ್ ಎಂಬುವವರು ತಮ್ಮ ಹೊಲದಲ್ಲಿನ ಬೋರ್ವೆಲ್ಗೆ ಟ್ರಾನ್ಸ್ಫಾರ್ಮರ್ ಹಾಕಿಕೊಡಲು ಅರ್ಜಿ ಸಲ್ಲಿಸಿದ್ದರು.ಆದರೆ, ಇಬ್ಬರೂ ಟ್ರಾನ್ಸ್ಫಾರ್ಮರ್ ಹಾಕಿಕೊಡಲು 20 ಸಾವಿರ ರೂ. ಕೇಳಿದ್ದರಂತೆ. ಈ ಕುರಿತು ಎಸಿಬಿಗೆ ಉಮೇಶ್ ದೂರು ನೀಡಿದ್ದರು. ದೂರು ಆಧರಿಸಿ ಡಿಎಸ್ಪಿ ಶಿವಕುಮಾರ್, ಸಿಪಿಐ ಹಿರೇಮಠ್, ರವಿ, ಬೀಳಗಿ, ಬಾಳನಗೌಡ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ