ನ್ಯೂಸ್

ಹೂವಿನ ಬೆಲೆ ಕುಸಿತ, ರೈತರು ಕಂಗಾಲು/ಚೆAಡು ಹೂವನ್ನು ರಸ್ತೆಗಳಿಗೆ ಸುರಿಯುತ್ತಿರುವ ರೈತರು/ ಬೆಲೆ ಇಲ್ಲದ ಸೆವಂತಿಗೆ ತೋಟಗಳಲ್ಲಿ ಕೋಳೆಯುವಂತಾಗಿದೆ/ಪರಹಾರಕ್ಕೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್. ಮುನಿವೆಂಕಟೇಗೌಡ
ಸರಣಿ ಹಬ್ಬಗಳು ಮತ್ತು ಶುಭ ಕಾರ್ಯಗಳು ಶುಭದಿನಗಳಿರುವ ಆಗಸ್ಟ್ ತಿಂಗಳಿAದ ದಸರಾ ಮುಗಿಯುವರೆವಿಗೆ ಹೂವಿಗೆ ಹೆಚ್ಚಿನ ಬೇಡಿಕೆಯಿರುತ್ತದೆ ಎಂದು ರೈತರು ಲಕ್ಷಾಂತರ ರೂಗಳ ಬಂಡವಾಳ ಹಾಕಿ ಹೂವು ಬೆಳೆದಿದ್ದು. ಹೂವಿಗೆ ಕನಿಷ್ಟ ಬೆಲೆಯೂ ಸಿಗದೆ ಬೆಳೆದ ಹೂವನ್ನು ತೋಟಗಳಲ್ಲಿಯೇ ಬಿಡುವಂತಾಗಿದ್ದು ರೈತರು ಕಂಗಾಲಾಗಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಪಕ್ಕದ ಆಂದ್ರ ಪ್ರದೇಶಕ್ಕೆ ಸಮೀಪವಿರುವ ಕೋಲಾರ ಜಿಲ್ಲೆಯ ರೈತರು ಆಗಸ್ಟ್ ತಿಂಗಳಿAದ ಪ್ರಾರಂಭವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಶ್ರಾವಣ ಶನಿವಾರಗಳು, ವರಮಹಾಲಕ್ಷ್ಮಿ ಹಬ್ಬ, ಗಣೇಶ ಚತುರ್ಥಿ ಸೇರಿದಂತೆ ದಸರಾ ಸರಣಿ ಹಬ್ಬಗಳು ಬರುತ್ತವೆ, ಹಬ್ಬಗಳಿಗೆ ರಾಜಧಾನಿ ಬೆಂಗಳೂರು ಮತ್ತು ಪಕ್ಕದ ತಿರುಪತಿ ಮತ್ತು ಆಂಧ್ರಪ್ರದೇಶದ ಜನರಿಗೆ ಹೂವುಗಳ ಬೇಡಿಕೆ ಹೆಚ್ಚಾಗುತ್ತದೆ ಎಂಬ ಉದ್ದೇಶದಿಂದ ಜಿಲ್ಲೆಯಲ್ಲಿ ೫೦೦೦ ಹೆಕ್ಟೇರ್ ಪ್ರದೇಶದಲ್ಲಿ ರೈತರು ಚೆಂಡು ಮಲ್ಲಿಗೆ ಮತ್ತು ಸೇವಂತಿ ಹೂವು ನಾಟಿ ಮಾಡಿದರು,

ಮೊದಲೇ ಹೂವು ನಾರಿನ ಬೆಲೆ ಹೆಚ್ಚಿದ್ದು ರೈತರು ಲಕ್ಷಾಂತರ ಬಂಡವಾಳ ಹಾಕಿ ನಾಟಿ ಮಾಡಿ ಇದೀಗ ಕೈ ಸುಟ್ಟಿಕೊಂಡು ತಾವು ಬೆಳೆದ ಹೂವನ್ನು ಕೆಲವರು ರಸ್ತೆಗೆ ಸುರಿಯುತ್ತಿದ್ದರೆ ಇನ್ನು ಕೆಲವರು ನಗರ ಪ್ರದೇಶಗಳಲ್ಲಿ ಹೂವನ್ನು ಉಚಿತವಾಗಿ ಜನರಿಗೆ ಹಂಚುವAತಾಗಿದೆ. ಪಿತ್ರಪಕ್ಷಗಳು ಮುಗಿಯುತ್ತಾ ಬಂದಿದ್ದು. ಇನ್ನೆನು ದಸರಾ ಪ್ರಾರಂಭದ ದಿನಗಳು ಬರುತ್ತಿವೆ ಇನ್ನಾದರು ಬೆಲೆ ರೈತರ ಕೈಯಿಡಿದರೆ ಹೂವು ಬೇಳೆಗಾರರು ಸಂಕಸ್ಠದಿAದ ಪರಾಗುತ್ತಾರೆ ಇಲ್ಲದೆ ಹೋದರೆ ರೈತರು ಸಾಲದ ಸೂಲಕ್ಕೆ ಸಿಕ್ಕುವುದು ಗ್ಯಾರಂಟಿ.

ಬಾಕ್ಸ್:
ಲಕ್ಷಾAತರ ರೂ.ಗಳ ಖರ್ಚು ಮಾಡಿ ಹೂವಿನ ಬೆಳೆ ಮಾಡಿರುವ ಹೂವು ಬೆಳೆಗಾರರು ಇಂದು ಬೀದಿಗೆ ಬಂದಿದ್ದು ಹೂವು ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂಧಿಸಿ ಪರಿಹಾರ ಧನ ನೀಡಬೇಕು ಎಂದು ಸರ್ಕಾರಕ್ಕೆ ಹೂವು ಬೆಳೆಗಾರರು ಒತ್ತಾಯಿಸಿದ್ದಾರೆ.

ಕೋಟ್:
ಉತ್ತಮ ತಳಿಯ ಸೇವಂತಿ ನಾರನ್ನು ಪಕ್ಕದ ತಮಿಳುನಾಡಿನಿಂದ ಪ್ರತಿ ನಾರಿಗೆ ೪ ರೂ.ಕೊಟ್ಟು ೧೦ ಸಾವಿರ ನಾರು ಖರೀದಿಸಿ, ಭೂಮಿಗೆ ಮಲ್ಚಿಂಗ್ ಪೇಪರ್, ಗೊಬ್ಬರ ಹಾಕಿ ನಾಟಿ ಮಾಡಲಾಗಿ ರೋಗ ಬರದಂತೆ ಪ್ರತಿ ವಾರಕ್ಕೊಮ್ಮೆ ಔಷಧಿ ಸಿಂಪಡಿಸಿ ಸುಮಾರು ೩ ಲಕ್ಷ ಹಣ ವ್ಯಯ ಮಾಡಿ ಬೆಳೆ ಮಾಡಲಾಗಿದೆ ಆದರೆ ಸೇವಂತಿ ಹೂವಿನ ಬೆಲೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ೨೦-೩೦ ರೂ.ಗೆ ಮಾರಾಟವಾಗುತ್ತಿದ್ದು ಹೂವು ಕಟಾವು ಮಾಡಿದ ಕೂಲಿಯೂ ಸಹ ಸಿಗುತ್ತಿಲ್ಲ ಅದ್ದರಿಂದ ಬೆಳೆದ ಹೂವನ್ನು ಕಟಾವು ಮಾಡದೆ ತೋಟದಲ್ಲಿ ಬಿಡಲಾಗಿದೆ.

-ಹೆಚ್.ಸೊಣ್ಣಪ್ಪ, ಅರಾಭಿಕೊತ್ತನೂರು, ಸೇವಂತಿ ಬೆಳೆಗಾರರು.

ಮಾರುಕಟ್ಟೆಯಲ್ಲಿ ಚೆಂಡು ಹೂವಿನ ಉತ್ತಮ ತಳಿಯ ನಾರು ಬಂದಿದೆ, ಪ್ರತಿ ನಾರಿಗೆ ೩ ರೂ. ಉತ್ತಮ ಗುಣಮಟ್ಟ ಹಾಗು ಉತ್ತಮ ಇಳುವರಿ ಬರುತ್ತದೆ ಎಂದು ನರ್ಸರಿ ಮಾಲೀಕರು ಪುಸಲಾಯಿಸಿದ್ದರಿಂದ ಅವರ ಮಾತಿನಂತೆ ದುಬಾರಿ ಬೆಲೆಗೆ ಸುಮಾರು ೫ ಸಾವಿರ ನಾರು ಖರೀದಿಸಿ ಮಲ್ಚಿಂಗ್ ಪೇಪರ್ ಅಳವಡಿಸಿ ಗುಣಮಟ್ಟದ ಔಷಧಿಗಳನ್ನು ಸಿಂಪಡಿಸಿ ಸುಮಾರು ಒಂದು ಲಕ್ಷದವರೆವಿಗೂ ಖರ್ಚು ಮಾಡಿ ಬೆಳೆ ಬೆಳೆಯಲಾಯಿತು ಆದರೆ ಎಷ್ಟೇ ಗುಣಮಟ್ಟದ ಚೆಂಡು ಮಲ್ಲಿಗೆ ಮಾರುಕಟ್ಟೆಗೆ ತಂದರೂ ಮಾರುಕಟ್ಟೆ ಕೇಳುವವರಿಲ್ಲದೆ ಬೀದಿಗೆ ಸುರಿಯುತ್ತಿದ್ದೇವೆ. ೪೦ ಕೆ.ಜಿ ಚೆಂಡು ಹೂವು ಮಾರುಕಟ್ಟೆಯಲ್ಲಿ ೨೦೦ ರೂಗಳಿಗೆ ಮಾರಾಟವಾಗುತ್ತಿದೆ. ಹೂವು ಕಠಾವು ಮಾಡುವ ಕೊಲಿ ಸಿಗದಂತೆ ಆಗಿದೆ.

-ಅಂಬರೀಶ್, ಚೆಂಡು ಹೂ ಬೆಳೆಗಾರ ಮಲ್ಲಸಂದ್ರ.

ಚಿತ್ರ ೨೪ ಕೆ.ಎಲ್.ಆರ್. ೦೨ ಅರಾಭಿಕೊತ್ತನೂರು ಗ್ರಾಮದ ಹೆಚ್.ಸೊಣ್ಣಪ್ಪ ನವರ ಸೇವಂತಿಗೆ ಹೂವಿಗೆ ಬೆಲೆ ಇಲ್ಲದೆ ಇರುವುದರಿಂದ ತೋಟದಲ್ಲಿ ಹೂವು ಬೀಡಿಸದೆ ಇರುವುದು.