ಕೋಲಾರ: ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆದು ನಷ್ಟ ಅನುಭವಿಸಿದ ರೈತ ಹಿಂಗಾರಿನಲ್ಲಿ ಹುರುಳಿ ಬಿತ್ತನೆಗೆ ಹಿಂದೇಟು ಹಾಕಿದ್ದು, ಹುರುಳಿ ಧಾರಣೆ ಹೆಚ್ಚಾಗುವ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ ಸಾವಾನ್ಯವಾಗಿ ಅಕ್ಟೋಬರ್-ನವೆಂಬರ್‌ನಲ್ಲಿ ಹುರುಳಿ ಬಿತ್ತನೆ ವಾಡುವುದು ವಾಡಿಕೆ. ಈ ಅವಧಿಯಲ್ಲಿ ಎಡೆಬಿಡದೆ ಮಳೆ ಸುರಿದ ಪರಿಣಾಮ ರಾಗಿ ಬೆಳೆ ನೆಲಕಚ್ಚಿದ್ದು, ಶೇ. 73 ಫಸಲು ನಾಶವಾಗಿತ್ತು. ಇದರಿಂದಾಗಿ ಕಂಗೆಟ್ಟಿದ್ದ ರೈತ ಹುರುಳಿ ಬಿತ್ತನೆಗೆ ಮುಂದಾಗಲಿಲ್ಲ.
ಜಿಲ್ಲೆಯಲ್ಲಿ ಸರಾಸರಿ 8000 ಹೆಕ್ಟೇರ್‌ನಲ್ಲಿ ಹುರುಳಿ ಬಿತ್ತನೆ ವಾಡುವುದು ವಾಡಿಕೆ. ಕಳೆದ ವರ್ಷ 8690 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಈ ಬಾರಿ 1386 ಹೆಕ್ಟೇರ್‌ನಲ್ಲಿ ವಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಅಧಿಕ ಪ್ರವಾಣದಲ್ಲಿ ಇಳುವರಿ ಬಂದಿದ್ದರಿಂದ ಕೆಜಿ 20ರಿಂದ 30 ರೂಪಾಯಿಯೊಳಗೆ ವಾರಾಟವಾಗಿತ್ತು. ಆದರೆ ಈ ಬಾರಿ 5060 ರೂಪಾಯಿ ಮೇಲ್ಪಟ್ಟು ವಾರಾಟವಾಗಬಹುದು ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಸಾವಾನ್ಯವಾಗಿ ಒಂದು ಸಾಲು ಉಳುಮೆ ವಾಡಿ ಬಿತ್ತನೆ ವಾಡಲಾಗುತ್ತದೆ. ಎಕರೆಗೆ 6ರಿಂದ 7 ಕೆಜಿ ಹುರುಳಿ ಬಿತ್ತನೆ ವಾಡಿದರೆ ಸಾಕು. ಬಿತ್ತನೆ ಬೀಜ ಮತ್ತು ಉಳುಮೆ ಸೇರಿ 1000 ರೂ. ವಾತ್ರ ಖರ್ಚು ಬರುತ್ತದೆ. ಇನ್ನು ಕಾಯಿ ಕಟಾವು, ಒಕ್ಕಣಿ ವಾಡುವುದೂ ಸೇರಿದರೆ 5 ಸಾವಿರ ರೂ. ಮೀರುವುದಿಲ್ಲ. ಎಕರೆಗೆ ಮೂರು ಕ್ವಿಂಟಾಲ್ ಇಳುವರಿ ಬಂದು ಕೆಜಿಗೆ 30 ರೂ.ನಂತೆ ವಾರಾಟವಾದರೂ 9 ಸಾವಿರ ರೂ. ರೈತನಿಗೆ ಸಿಗುತ್ತದೆ. ಮೂರ‌್ನಾಲ್ಕು ಸಾವಿರ ರೂಪಾಯಿ ಲಾಭದಲ್ಲೇ ಕಷಿಕ ಇರುತ್ತಾನೆ.
ಹುರುಳಿ ಬೆಳೆಯುವುದರಿಂದ ಮುಂದಿನ ಫಸಲಿಗೆ ಗೊಬ್ಬರ ಹಾಕದಿದ್ದರೂ ನೆಲ ಫಲವತ್ತತೆಯಿಂದ ಕೂಡಿರುತ್ತದೆ. ಒಕ್ಕಣಿ ಸಂದರ್ಭದಲ್ಲಿ ಸಿಗುವ ಹೊಟ್ಟು ಕುರಿ, ಮೇಕೆಗಳಿಗೆ ಆಹಾರವಾಗುತ್ತದೆ. ಬೇಸಿಗೆಯಲ್ಲಿ ಮೇವಿನ ಅಭಾವ ಎದುರಾದಾಗ ಹುರುಳಿ ಹೊಟ್ಟನ್ನೇ ಬಳಸಲಾಗುತ್ತದೆ. ಕಷಿಕನಿಗೆ ಇಷ್ಟೆಲ್ಲ ಅನುಕೂಲಗಳಿದ್ದರೂ, ಹುರುಳಿ ಬಿತ್ತನೆ ವಾಡುವ ಗೋಜಿಗೆ ಹೋಗಲಿಲ್ಲ ಎಂಬುದು ವಿಪರ್ಯಾಸವೇ ಸರಿ.
ರಾಗಿ ನಷ್ಟ ಎಷ್ಟು?: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 64567 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿತ್ತು. ಕಳೆದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಸುರಿದ ಬಾರಿ ಮಳೆಯಿಂದ ಶೇ.73 ಅಂದರೆ 47105 ಹೆಕ್ಟೇರ್‌ನಲ್ಲಿ ಸಂಪೂರ್ಣ ಬೆಳೆ ಹಾನಿಯಾಗಿತ್ತು. ಕೋಲಾರ 14714, ವಾಲೂರು 9457, ಬಂಗಾರಪೇಟೆ 9682, ಕೆಜಿಎಫ್ 2908, 4854, ಶ್ರೀನಿವಾಸಪುರ 5490 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿತ್ತು ಎಂದು ಕಷಿ ಇಲಾಖೆ ಅಧಿಕಾರಿಗಳು ವಾಹಿತಿ ನೀಡಿದ್ದಾರೆ.
ಪಹಣಿಯಲ್ಲಿ ನಮೂದಿಸಿರಬೇಕು: ಮುಂಗಾರು ಹಂಗಾಮಿಗೆ ಸರ್ಕಾರದಿಂದ ಬೆಳೆ ಸಮೀಕ್ಷೆ ನಡೆಸಲಾಗಿತ್ತು. ಕಷಿ, ಕಂದಾಯ ಮತ್ತು ಖಾಸಗಿಯವರಿಂದ ಸಮೀಕ್ಷೆ ವಾಡಲಾಗಿದ್ದು, ರೈತರು ಬೆಳೆಯನ್ನು ತಾವೇ ನಮೂದು ವಾಡಿಕೊಳ್ಳುವ ಅವಕಾಶವಿತ್ತು. ಎಲ್ಲ ರೈತರಿಗೂ ತಂತ್ರಜ್ಞಾನದ ಅರಿವಿರುವುದಿಲ್ಲ. ಅದೆಷ್ಟೋ ಅಧಿಕಾರಿಗಳು ಸ್ಥಳ ಪರಿಶೀಲಿಸದೆ ಆಯಾ ಗ್ರಾಮದಲ್ಲಿ ಯಾರೋ ಒಬ್ಬರ ಕೈಗೆ ಮೊಬೈಲ್ ಕೊಟ್ಟು ಬೆಳೆ ಸಮೀಕ್ಷೆ ನಡೆಸಿದ್ದರು. ರಾಗಿ ಇರುವ ಕಡೆ ನೀಲಗಿರಿ ಎಂದು ವಾಡಿರುವ ನೂರಾರು ನಿದರ್ಶನಗಳಿವೆ. ಪಹಣಿ ಪರಿಶೀಲನೆ ಜತೆಗೆ ರೈತರಿಂದ ಅರ್ಜಿ ಪಡೆದು ನಷ್ಟ ಪರಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕಷಿ ಅಧಿಕಾರಿಗಳು ಹೇಳುತ್ತಾರಾದರೂ ಪಹಣಿಯಲ್ಲಿ ರಾಗಿ ಬೆಳೆ ನಮೂದಾಗದೆ, ಅರ್ಜಿಯೂ ನೀಡದ ರೈತರು ನಷ್ಟ ಪರಿಹಾರದಿಂದ ವಂಚಿತರಾಗಿದ್ದಾರೆ.
ರಾಗಿಯಲ್ಲಿ ನಷ್ಟ ಹೊಂದಿದ್ದರ ಜತೆಗೆ ಅಕ್ಟೋಬರ್, ನವೆಂಬರ್‌ನಲ್ಲಿ ಮಳೆ ಹೆಚ್ಚಾಗಿದ್ದರಿಂದ ಹುರುಳಿ ಬಿತ್ತನೆಗೆ ರೈತ ಮುಂದಾಗಲಿಲ್ಲ. ರಾಗಿ ಬೆಳೆ ಹಾನಿ ಸಂಬಂಧ ಹೆಕ್ಟೇರ್‌ಗೆ ಸರ್ಕಾರ 6800 ರೂ. ನಿಗದಿಪಡಿಸಿದೆ. ನ.30ರವರೆಗೆ ಸರ್ಕಾರ ಭೂಮಿ ತಂತ್ರಾಂಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ ವಾಡಿಕೊಡಲಾಗಿತ್ತು. ಕರೊನಾ ಕಾರಣ ಈ ತಿಂಗಳಲ್ಲೂ ಕಾಲಾವಕಾಶವಿತ್ತು. ರೈತರ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆಯಾಗುತ್ತಿದೆ. ರೂಪಾದೇವಿ ವಿ.ಡಿ, ಜಂಟಿ ನಿರ್ದೇಶಕ, ಕಷಿ ಇಲಾಖೆ, ಕೋಲಾರ ಪ್ರತಿವರ್ಷ ಹುರುಳಿ ಬಿತ್ತನೆ ವಾಡುತ್ತಿದ್ದೆವು. ಆದರೆ ಈ ಬಾರಿ ರಾಗಿ ತೆನೆ ಕಟಾವು ವಾಡಲು ಆಗಲಿಲ್ಲ. ಎಲ್ಲ ಮಣ್ಣು ಪಾಲಾಯಿತು. ಇನ್ನು ಹುರುಳಿ ಬಿತ್ತನೆ ವಾಡಿದರೆ ಮಳೆ ಕಸಿದುಕೊಳ್ಳುತ್ತದೆ. ರಾಗಿ ನಷ್ಟದ ಜತೆ ಅದೂ ಹೊರೆಯಾಗುತ್ತದೆ ಎಂದು ಬಿತ್ತನೆ ವಾಡಲಿಲ್ಲ. ಜಿ.ಎನ್.ಈರಪ್ಪರೆಡ್ಡಿ, ಮಲ್ಲಗಾನಹಳ್ಳಿ