ಬೈಲಕುಪ್ಪೆ: ಜಿಲ್ಲೆಯ ಗಡಿಭಾಗ ಕೊಪ್ಪದ ಬಿ.ಎಂ.ರಸ್ತೆಯ ಪಕ್ಕದಲ್ಲಿ ರುವ ಕಾವೇರಿ ಮಾತೆಗೆ ಹುತ್ತರಿ ಹಬ್ಬದ ಪ್ರಯುಕ್ತ ಬುಧವಾರ ಸಂಜೆ ಪರಿಸರವಾದಿ ಬಸವೇಗೌಡ ವಿಶೇಷ ಪೂಜೆ ಸಲ್ಲಿಸಿದರು. ಕಾವೇರಿ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾ ಯಿತು. ಕಾವೇರಿ ಮಾತೆಗೆ ವಿವಿಧ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಬೆಬಿಂದ್ರ ಪ್ರಸಾದ್. ಸದಸ್ಯ ರಾದ ವಿಜೇಂದ್ರ ಪ್ರಸಾದ್, ರವೀಂದ್ರ ಪ್ರಸಾದ್ ಕುಶಾಲನಗರದ ವಿಶ್ವ ನಾಥ್, ಶಾಂತಪ್ಪ, ಬಿ.ಬಸವೇಗೌಡ, ಗ್ರಾಪಂ ಸದಸ್ಯ ಮಂಜು, ಅರ್ಚಕ ಪ್ರಸನ್ನ ಭಟ್ಟ, ಗ್ರಾಮಸ್ಥ ಚಂದ್ರು ಇತರರು ಹಾಜರಿದ್ದರು.