ನ್ಯೂಸ್

ಹಿರೀಸಾವೆ ಹೋಬಳಿ ಮತಿಘಟ್ಟ ಕೆರೆಗೆ ನ.1ರಿಂದ ಹರಿಯಲಿದೆ ಹೇಮಾವತಿ ನೀರು

ಚನ್ನರಾಯಪಟ್ಟಣ: ನವೆಂಬರ್ 1 ರಿಂದ ಹಿರೀಸಾವೆ ಹೋಬಳಿಯ ಮತಿಘಟ್ಟ ಗ್ರಾಮದ ಕೆರೆಗೆ ನೀರು

ಹರಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ತಾಲೂಕಿನ ಹಿರೀಸಾವೆ ಹೋಬಳಿ ಚನ್ನಹಳ್ಳಿ ಗ್ರಾಮದ ಬಳಿ ನಡೆಯುತ್ತಿರುವ

ಜುಟ್ಟನಹಳ್ಳಿ-ಹಿರೀಸಾವೆ ಏತನೀರಾವರಿ ಯೋಜನೆಯ ಕಿರುಗಾಲುವೆ ಕಾಂಕ್ರೀಟ್

ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಮಾತನಾಡಿ, ಈ ಕಾಮಗಾರಿಯು ಇನ್ನು 3 ದಿನಗಳಲ್ಲಿ

ಪೂರ್ಣಗೊಳ್ಳಲಿದೆ ಎಂದರು.

ಸುಮಾರು 120 ಮೀಟರ್ ಉದ್ದಕ್ಕೂ ಎರಡೂ ಬದಿಗೂ ಕಾಂಕ್ರೀಟ್ ಅಳವಡಿಸಲಾಗುತ್ತಿದೆ.

ಜನಿವಾರ ಕೆರೆಯಿಂದ ಮರಿಶೆಟ್ಟಿಹಳ್ಳಿ ಗ್ರಾಮದ ಕೆರೆಗೆ ಈಗಾಗಲೇ ನೀರು ಹರಿಯುತಿದ್ದು

ಇನ್ನೆರೆಡು ದಿನಗಳಲ್ಲಿ ಚನ್ನಹಳ್ಳಿ ಕಟ್ಟೆಗೆ ನೀರು ಹರಿಸಲು ವ್ಯವಸ್ಥೆ ಮಾಡಲಾಗಿದೆ

ಎಂದು ತಿಳಿಸಿದರು.

ಬಲದಂಡೆ ನಾಲೆಯ ಕಾಮಗಾರಿ ಚುರುಕಿನೊಂದಿಗೆ ಸಾಗುತ್ತಿದ್ದು 10-15 ದಿನಗಳಲ್ಲಿ

ಸುಂಡಹಳ್ಳಿ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಯಲಿದೆ. ಮುಂದಿನ ಹಂತದಲ್ಲಿ

ಜುಟ್ಟನಹಳ್ಳಿ ಹಾಗೂ ಆಯರಹಳ್ಳಿ ಸೇರಿದಂತೆ ವಿವಿಧ ಕೆರೆಗಳಿಗೆ ನೀರು ತುಂಬಿಸುವ

ಉದ್ದೇಶವಿದೆ ಎಂದು ಭರವಸೆ ನೀಡಿದರು.

ಮತಿಘಟ್ಟ ಕೆರೆ ತುಂಬಿದ ಬಳಿಕ ಹಿರೀಸಾವೆ ಕೆರೆಗೆ ನೀರು ಹರಿಯಲಿದೆ.

ಜುಟ್ಟನಹಳ್ಳಿ-ಹಿರೀಸಾವೆ ಏತನೀರಾವರಿ ಯೋಜನೆಯಲ್ಲಿ ವ್ಯಾಪ್ತಿಯ ಕೆರೆಗಳಿಗೆ

ನೀಡಲಾಗಿದ್ದ 28 ಕ್ಯೂಸೆಕ್ಸ್ ನಿಂದ 56 ಕ್ಯೂಸೆಕ್ಸ್ ವರೆಗೆ ಹೆಚ್ಚುವರಿಯಾಗಿ ಅನುಮೋದನೆ

ಪಡೆಯಲಾಗಿದೆ. ಇದರಿಂದ ವ್ಯಾಪ್ತಿಯ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಲು

ಅನುಕೂಲವಾಗಲಿದೆ ಎಂದರು.

ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ

ಮಂಜುನಾಥ್, ಪ್ರಮುಖರಾದ ಹಿರೀಸಾವೆ ಫೈನಾನ್ಸ್ ಮಹೇಶ್, ಬೂಕದ ವಾಸು ಹಾಗೂ ಇತರರು

ಇದ್ದರು.