ನ್ಯೂಸ್

ಹಿರೀಸಾವೆ ರೈತ ಸಂಪರ್ಕ‌ ಕೇಂದ್ರದಲ್ಲಿ ಫಲಾನುಭವಿಗಳಿಗೆ ಕೃಷಿ ಪರಿಕರ ವಿತರಣೆ

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ
ಇಲಾಖೆಯ ಯಾಂತ್ರೀಕರಣ ಯೋಜನೆಯಡಿ ಒಂದು ಕಲ್ಟಿವೇಟರ್ ಹಾಗೂ ಮೂರು ರೋಟವೇಟರ್‌ಗಳನ್ನು ರೈತ ಫಲಾನುಭವಿಗಳಿಗೆ ಶುಕ್ರವಾರ ವಿತರಿಸಲಾಯಿತು.ಬಳಿಕ ಕೃಷಿ ಅಧಿಕಾರಿ ಶೇಖರ್ ರೆಡ್ಡಿ ಮಾತನಾಡಿ, ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಈ ಯೋಜನೆಯ ಸಹಾಯ ಧನದಲ್ಲಿ ನೀಡಲಾಗುವುದು. ಅಗತ್ಯ ಇರುವ ರೈತರು
ಅನ್ ಲೈನ್ ಅಥವಾ ರೈತ ಸಂಪರ್ಕ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
ಪಂಗಡವರಿಗೆ ಶೇ.90 ರಷ್ಟು ಸಹಾಯ ಧನವನ್ನು ಇಲಾಖೆ ನೀಡಲಿದೆ. ರೈತ ಸಂಪರ್ಕ
ಕೇಂದ್ರದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.ರಾಗಿ, ಕಡಲೆಕಾಳು ಸೇರಿದಂತೆ ವಿವಿಧ ಬಿತ್ತನೆ ಬೀಜಗಳು ಹಾಗೂ ಜಿಂಕ್ ಸಲ್ಪೇಟ್,
ಬೋರಾಕ್ಸ್, ಟ್ರೈಕೋಡರ್ಮ ಹಾಗೂ ಬ್ಯಾಟರಿ ಸ್ಟ್ರೇಯರ್ ಪೋಷಕಾಂಶಗಳನ್ನು ಸಹಾಯ
ಧನದಲ್ಲಿ ರೈತರು ಪಡೆಯಬಹುದು. ಜತೆಗೆ ಅಧಿಕಾರಿಗಳ ಶಿಫಾರಸ್ಸು ಅನುಸರಿಸಿದರೆ ಉತ್ತಮ
ಫಸಲು ಪಡೆಯಬಹುದು ಎಂದು ಸಲಹೆ ನೀಡಿದರು. ಸಿಬ್ಬಂದಿ ವರ್ಗ ಹಾಗೂ ಹೋಬಳಿಯ ರೈತ ಫಲಾನುಭವಿಗಳು ಇದ್ದರು.