ನ್ಯೂಸ್

ಹಿಮ್ಸ್ ನಲ್ಲಿ ಕರೊನಾ ಚಿಕಿತ್ಸೆಗೆ ಮತ್ತೊಂದು ಹೊಸ ವಾರ್ಡ್‌ ಸಿದ್ಧ

ಹಾಸನ: ಜಿಲ್ಲೆಯಲ್ಲಿ ಶಂಕಿತ ಕರೊನಾ ಸೋಂಕಿತರು ಹಾಗೂ ಸೋಂಕಿತರ ತಪಾಸಣೆಗೆ ನಗರದ ಹಾಸನ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ 50 ಹಾಸಿಗೆಗಳ ಸಂಪೂರ್ಣ ಪ್ರತ್ಯೇಕಿತ ಮತ್ತೊಂದು ವಾರ್ಡ್‌ ಸಿದ್ಧವಾಗುತ್ತಿದೆ.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಹಿರಣ್ಣಯ್ಯ ಹಾಗೂ ಇತರ ವೈದ್ಯಾಧಿಕಾರಿಗಳು ಶನಿವಾರ ಹೊಸ ವಾರ್ಡ್ ಪರಿಶೀಲಿಸಿದರು.

ಭಾನುವಾರದಿಂದಲೇ ಈ ವಾರ್ಡ್ ಕಾರ್ಯಾರಂಭ ಮಾಡಲಿದೆ. ಈಗಾಗಾಲೆ‌ 25 ಹಾಸಿಗೆಗಳ ಪ್ರತ್ಯೇಕ ವಾರ್ಡ ತೆರೆಯಲಾಗುದ್ದು ಆರು ಶಂಕಿತರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.