ವಿಜಯವಾಣಿ ಸುದ್ದಿಜಾಲ ಕಲಬುರಗಿ
ಶ್ರೀಕೃಷ್ಣ ಕೊಳಲು ಊದಿದ್ದು ಸಾಕು, ಆತನ ಕೈಯಲ್ಲಿ ಸುದರ್ಶನ ಚಕ್ರ ಹಿಡಿಯುವ ಸಮಯ ಬರಬೇಕು. ಸುದರ್ಶನ ಚಕ್ರ ಕೈಯಲ್ಲಿ ಬರದಿದ್ದರೆ ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ರಬ್ಬರ್ ಸ್ಟಾÈಂಪ್ ಹಿಂದುಗಳು ಹೆಚ್ಚಾಗಿದ್ದು, ಸ್ವಾಮೀಜಿಗಳ ಧ್ವನಿ ಕುಗ್ಗಿಸಲಾಗುತ್ತಿದೆ. ಬಾಂಗ್ಲಾ ಸ್ಥಿತಿ ಬರಬಾರದೆಂದರೆ ಎಚ್ಚೆತ್ತುಕೊಳ್ಳಬೇಕು ಎಂದು ಶ್ರೀರಾಮಸೇನೆ ಗೌರವಾಧ್ಯಕ್ಷ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಗ್ರಹಿಸಿದರು.
ಬಾಂಗ್ಲಾದೇಶದ ಹಿಂದುಗಳ ಮೇಲಿನ ದೌರ್ಜನ್ಯ ಹಾಗೂ ಹಿಂದು ವಿರೋಧಿ ನೀತಿ ಖಂಡಿಸಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದ ಬಳಿ ಹಿಂದು ಹಿತರP್ಷÀಣಾ ಸಮಿತಿಯಿಂದ ಶನಿವಾರ ಹಮ್ಮಿಕೊಂಡ ಬೃಹತ್ ಜನಾಕ್ರೋಶ ಸಭೆಯಲ್ಲಿ ಮಾತನಾಡಿ, ವಿಶ್ವದ ಎಲ್ಲಿಯೇ ಹಿಂದುಗಳ ಮೇಲೆ ದಬ್ಬಾಳಿಕೆ, ಹಲ್ಲೆ, ದೌರ್ಜನ್ಯವಾದರೆ ಯಾರೂ ಧ್ವನಿ ಎತ್ತಲ್ಲ. ವಾಟ್ಸ್ಪ್ ಸ್ಟೇಟಸ್‌ಗೆ ಸೀಮಿತರಾಗಿದ್ದಾರೆ. ನಮ್ಮ ಸಹಾಯಕ್ಕೆ ಯಾವ ವಿಶ್ವಸಂಸ್ಥೆ ಬರುವುದಿಲ್ಲ. ಮುಸ್ಲಿಂರಿಗೆ ತೊಂದರೆ ಆದರೆ, ಎಲ್ಲ ದೇಶದವರು ಧ್ವನಿ ಎತುತ್ತಾರೆ. ಹಿಂದುಗಳು ಸ್ವಯಂ ಧರ್ಮ ರಕ್ಷಣೆಯ ಸಂಕಲ್ಪ ಮಾಡಬೇಕು ಎಂದರು.
ಇಸ್ಕಾನ್ ಪ್ರತಿನಿಧಿ ಸುವರ್ಣಗೌರ ಹರಿದಾಸ ಮಾತನಾಡಿ, ಬಾಂಗ್ಲಾದಲ್ಲಿ ಹಿಂದುಗಳ ಪರಿಸ್ಥಿತಿ ಭಯಂಕರವಾಗಿದೆ. ನಿತ್ಯದ ಪೂಜೆ, ಪುನಸ್ಕಾರ ಮಾಡಲು ಆಗುತ್ತಿಲ್ಲ. ಎಲ್ಲ ಹಿಂದುಗಳನ್ನು ಭಾರತ ಸರ್ಕಾರ ರಕ್ಷಿಸಬೇಕು. ಜೈಲಿನಲ್ಲಿರುವ ಚಿನ್ಮಯ ಕೃಷ್ಣದಾಸ್‌ರನ್ನು ಬಿಡುಗಡೆ ಮಾಡಬೇಕು. ಅಂತಾರಾಷ್ಟಿçÃಯ ರಾಜನೀತಿ ಮಧ್ಯಪ್ರವೇಶಿಸಬೇಕು ಎಂದರು.
ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತ್‌ನಿಂದ ಈಶಾನ್ಯ ರಾಜ್ಯದವರೆಗೂ ಮಾತ್ರ ಹಿಂದೂ ಸಂಸ್ಕೃತಿ ಉಳಿದಿದೆ. ರಬ್ಬರ್ ಸ್ಟಾÈಂಪ್ ಹಿಂದುಗಳಾಗದೆ, ಸನಾತನ ಸಂಸ್ಕೃತಿ ಎಲ್ಲಡೆ ಪಸರಿಸೋಣ ಎಂದರು.
ಶ್ರೀನಿವಾಸ ಸರಡಗಿಯ ಡಾ.ಅಪ್ಪಾರಾವ ದೇವಿ ಮುತ್ಯಾ, ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಶ್ರೀ ವೀರಭದ್ರ ಶಿವಾಚಾರ್ಯರು, ಶ್ರೀ ಬಳಿರಾಮ ಮಹಾರಾಜರು, ಶ್ರೀ ಮುರಾರಿ ಮಹಾರಾಜರು, ಶ್ರೀ ಕೆಂಚಬಸವ ಸ್ವಾಮೀಜಿ, ಬಿಜೆಪಿ ಜಿ¯್ಲÁಧ್ಯP್ಷÀ ಚಂದು ಪಾಟೀಲ್, ಶಿವರಾಜ ಪಾಟೀಲ್ ರz್ದÉÃವಾಡಗಿ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಉಮೇಶ ಪಾಟೀಲ್, ಮಹಾದೇವ ಬೆಳಮಗಿ, ಸುಧಾ ಹಾಲಕಾಯಿ, ನಾಗೇಂದ್ರ ಕಬಾಡೆ, ಸತೀಶ ಮಾವೂರ, ಸಿದ್ದರಾಜ ಬಿರಾದಾರ ಇತರರಿದ್ದರು.