ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತದ ಸೌಧದ ಆವರಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರತ್ನಾಂಬಿಕಾ ಅವರಿಗೆ ಮನವಿ ಸಲ್ಲಿಸಲಾಯಿತು. 
ನ್ಯೂಸ್

ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

ಚ್.ಡಿ.ಕೋಟೆ: ಕೇಂದ್ರ ಸರ್ಕಾರದ ಹಿಂದಿ ದಿವಸ್ ವಿರೋಧಿಸಿ ತಾಲೂಕು ಜೆಡಿಎಸ್ ವತಿಯಿಂದ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.


ತಾಲೂಕು ಆಡಳಿತಸೌಧದ ಮುಂಭಾಗ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿದರು.


ಮಾಜಿ ಶಾಸಕ ಚಿಕ್ಕಣ್ಣ ಮಾತನಾಡಿ, ಭಾರತ ದೇಶವು ಒಕ್ಕೂಟ ಸರ್ಕಾರವಾಗಿದೆ. ಆದರೆ ಪ್ರಾದೇಶಿಕ ಭಾಷೆಗಳಿಗೆ ಒತ್ತುಕೊಟ್ಟು ಅವುಗಳನ್ನು ಬೆಳೆಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಕರ್ತವ್ಯವಾಗಿರುತ್ತದೆ. ಆದರೆ ಕೇಂದ್ರ ಸರ್ಕಾರ ಹಿಂದಿ ದಿವಸವೆಂಬ ಆಚರಣೆ ನಡೆಸುತ್ತಿರುವುದರ ಹಿಂದೆ ಪ್ರಾದೇಶಿಕ ಭಾಷೆಗಳ ಮೇಲೆ ಹಿಡಿತ ಸಾಧಿಸುವ ಹುನ್ನಾರ ಅಡಗಿದೆ.


ಕರ್ನಾಟಕ ರಾಜ್ಯ ಕನ್ನಡ, ಕೊಂಕಣಿ, ತುಳು ಭಾಷೆಗಳನ್ನು ಒಳಗೊಂಡ ರಾಜ್ಯವಾಗಿದ್ದು, ಇಂತಹ ಭಾಷೆಗಳನ್ನು ಬೆಳೆಸುವ ಹಾಗೂ ರಕ್ಷಿಸುವ ಮೂಲಕ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಬೇಕೆಂದು ಒತ್ತಾಯಿಸಿದರು.

ನಂತರ ತಹಸೀಲ್ದಾರ್ ರತ್ನಾಂಬಿಕಾ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಚಾ.ನಂಜುಂಡಮೂರ್ತಿ, ಪಟೇಲ್ ರಾಜೇಗೌಡ, ರಾಜೇಂದ್ರ, ಗೋಪಾಲಸ್ವಾಮಿ, ನಾಗನಹಳ್ಳಿ ಶಾಂತಕುಮಾರ್, ಚಾಕಹಳ್ಳಿ ಕೃಷ್ಣ, ಶಫೀಉಲ್ಲಾ, ನಾಗನಾಯಕ, ನರಸಿಂಹೇಗೌಡ, ರಾಜು, ಶಿವಕುಮಾರ್, ಹೋ.ಕೆ. ಮಹೇಂದ್ರ, ದೊರೆಸ್ವಾಮಿ, ತೇಜು ಗುರುಮಲ್ಲು, ಗಾಯತ್ರಿ, ರೇಣುಕಾ, ಸವಿತಾ, ನಿಂಗನಾಯಕ, ರವಿ ಇದ್ದರು.