ನ್ಯೂಸ್

ಹಾಲು ಖರೀದಿ ದರ ಇಳಿಕೆ ಆದೇಶ ವಾಪಸ್ಸು ಮಾಡುವಂತೆ ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷಗಳಿಂದ ಜಿಲ್ಲಾಡಳಿತಕ್ಕೆ ಗಡುವು

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಚಿಮುಲ್ ಆಡಳಿತ ಮಂಡಳಿಯು ಹಾಲು ಉತ್ಪಾದಕರ ಖರೀದಿ ದರವನ್ನು ೨ ರೂಪಾಯಿ ಇಳಿಕೆ ಮಾಡಿರುವ ಆದೇಶವನ್ನು ಒಂದು ವಾರದ ಒಳಗೆ ವಾಪಸು ಪಡೆಯುವಂತೆ ಕೋಚಿಮುಲ್ ಆಡಳಿತ ಮಂಡಳಿಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದಿಂದ ಗಡುವು ನೀಡಿದರು.

ನಗರದಲ್ಲಿ ಗುರುವಾರ ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ ಕಛೇರಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದ ಮುಖಂಡರು ಎರಡು ಪಕ್ಷದ ಮುಖಂಡರಿAದ ಶುಕ್ರವಾರ ಸಾಂಕೇತಿಕವಾಗಿ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ, ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ಮನವಿ ನೀಡಿ, ಒಂದು ವಾರದೊಳಗೆ ಆದೇಶವನ್ನು ವಾಪಸ್ಸು ಪಡೆದು ಜಿಲ್ಲೆಯ ರೈತರನ್ನು ರಕ್ಷಣೆಗೆ ಮುಂದಾಗಬೇಕೆAದು ಒತ್ತಾಯಿಸುವುದು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ಮುಂದಾಗುವAತೆ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಜಿಲ್ಲೆಯ ರೈತರ ಜೀವನಾಧಾರವಾಗಿ ಹೈನುಗಾರಿಕೆಯನ್ನು ನಂಬಿ ಬದುಕನ್ನು ಕಂಡುಕೊAಡಿದ್ದಾರೆ. ಆದರೆ ಇವತ್ತು ಕೋಚಿಮುಲ್ ಆಡಳಿತ ಮಂಡಳಿಯ ತಪ್ಪು ನಿರ್ಧಾರಗಳಿಂದ ಜಿಲ್ಲೆಯ ಜನ ಹೈನುಗಾರಿಕೆಯಿಂದ ದೂರ ಉಳಿಯುವಂತ ವಾತಾವರಣವನ್ನು ಸೃಷ್ಟಿಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜನರ ಪರವಾಗಿ ನಿರಂತರವಾಗಿ ಹೋರಾಟಗಳ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಂಡು ಬಂದಿದ್ದಾರೆ. ಮುಂದೆಯೂ ಹೋರಾಟದಿಂದಲ್ಲೇ ಕೋಚಿಮುಲ್ ಆಡಳಿತ ಮಂಡಳಿಗೆ ಎಚ್ಚರಿಕೆಯನ್ನು ನೀಡಬೇಕಾಗಿದೆ ಎಂದು ಸಭೆಗೆ ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ದಿಢೀರ್‌ನೆ ಪ್ರತಿ ಲೀಟರ್ ಹಾಲಿನ ಮೇಲೆ ೨ ರೂ.ದರ ಕಡಮೆ ಮಾಡಿದ್ದಾರೆ. ಈಗಾಗಲೇ ಮಳೆಯ ಕೊರತೆಯ ನಡುವೆ ಕೋಚಿಮುಲ್ ಆಡಳಿತ ಮಂಡಳಿ ರೈತರ ನೆರವಿಗೆ ಧಾವಿಸದೇ ಗಾಯದ ಮೇಲೆ ಬರೆ ಎಳೆದಂತೆ ಮಾಡಿದ್ದಾರೆ ಪ್ರತಿ ಲೀಟರ್ ಹಾಲು ಉತ್ಪಾದನೆಗೆ ಕನಿಷ್ಠ ೪೦ ರೂ ಖರ್ಚು ಆಗುತ್ತದೆ ಆದರೆ ಇದೀಗ ೨ ರೂ. ದರ ಕಡಿತಗೊಳಿಸಿದ್ದು, ರೈತರಿಗೆ ಪ್ರತಿ ಲೀಟರ್‌ಗೆ ೩೧ ರೂ ಸಿಗಲಿದೆ. ಬರಗಾಲದ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಕಷ್ಟದಲ್ಲಿರುವಾಗ ಬೆಲೆ ಕಡಿತ ಎಷ್ಟು ಸರಿ ಎಂದು ಒಕ್ಕೂಟವನ್ನು ಪ್ರಶ್ನಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬು ಮೌನಿ ಮಾತನಾಡಿ, ಜಿಲ್ಲೆಯ ಹಾಲು ಉತ್ಪಾದಕರ ನೆರವಿಗೆ ಈ ಕೂಡಲೇ ಸರ್ಕಾರ ಮತ್ತು ಒಕ್ಕೂಟವು ಧಾವಿಸಬೇಕು ಕೋವಿಡ್ ಸಂದರ್ಭದಲ್ಲಿ ಹೈನುಗಾರಿಕೆ ಹಾಗೂ ರೈತರಿಗೂ ತೊಂದರೆ ಆಗಿತ್ತು. ಕ್ರಮೇಣವಾಗಿ ಚೇತರಿಸಿಕೊಳ್ಳುವ ಹಂತದಲ್ಲಿ ಹಾಲು ಖರೀದಿ ದರ ಕಡಿಮೆ ಮಾಡಿದ್ದು, ರೈತರಿಗೆ ಹಾಗೂ ಹಾಲು ಉತ್ಪಾದಕರಿಗೆ ಮಾಡಿದ ಮೋಸವಾಗಿದೆ. ಕೂಡಲೇ ಆದೇಶವನ್ನು ವಾಪಸ್ಸು ಪಡೆಯಬೇಕು. ಇಲ್ಲದೇ ಹೋದರೆ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದಲ್ಲಿ ರಾಜ್ಯಾದ್ಯಂತ ಜಂಟಿಯಾಗಿ ಹೋರಾಟವನ್ನು ನಡೆಸಲಾಗುತ್ತದೆ ಎಂದರು.

ಸಭೆಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ರಾಜ್ಯ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ವಡಗೂರು ರಾಮು, ಜಿಲ್ಲಾ ಬಿಜೆಪಿ ಮಹಿಳಾ ಅಧ್ಯಕ್ಷೆ ಅರುಣಮ್ಮ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್, ಪ್ರಧಾನ ಕಾರ್ಯದರ್ಶಿ ದಿಂಬ ನಾಗರಾಜಗೌಡ, ಮೈತ್ರಿ ಪಕ್ಷದ ಮುಖಂಡರಾದ ಸಾ.ಮಾ ಬಾಬು, ನಾಮಲ್ ಮಂಜು, ತೋಟಗಳ ಅಶೋಕ್, ರೋಟರಿ ಸುಧಾಕರ್, ಮಂಜುನಾಥ್, ಎಬಿವಿಪಿ ಹರೀಶ್ ಮುಂತಾದವರು ಇದ್ದರು.

ಚಿತ್ರ ೧೧ ಕೆ.ಎಲ್.ಆರ್. ೦೩ : ಹಾಲಿನ ದರ ಇಳಿಕೆಯನ್ನು ಖಂಡಿಸಿ, ಹೋರಾಟ ನಡೆಸಲು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದಿಂದ ಪೂರ್ವಭಾವಿ ಸಭೆ