ನ್ಯೂಸ್

ಹಾಲು ಒಕ್ಕೂಟದ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ / ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತುಗಳು / ಜೂ.೨೫ ರಂದು ಚುನಾವಣೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಹಾಲು ಒಕ್ಕೂಟಕ್ಕೆ ಜೂ.೨೫ ರಂದು ನಡೆಯಲಿರುವ ನಿರ್ದೇಶಕರ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಲು ಕಾಂಗ್ರೇಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಕಸರತ್ತುಗಳು ನಡೆಯಿತ್ತಿವೆ.

ಹಾಲು ಒಕ್ಕೂಟದ ೧೩ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ ೨ ಮಹಿಳಾ ಮೀಸಲು ಕ್ಷೇತ್ರಗಳು ಸೇರಿವೆ. ಈಗಾಗಲೇ ಆಯಾ ಪಕ್ಷಗಳಲ್ಲಿ ಮುಖಂಡರ ನೇತೃತ್ವದಲ್ಲಿ ಸಭೆಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ.

ಕೆಲವು ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಅವರು ಕ್ಷೇತ್ರಗಳಿಗೆ ತೆರಳಿ ಮತದಾರರನ್ನು ಓಲೈಸಿಕೊಳ್ಳಲು ಆಮಿಷಗಳ ಸಮೇತ ಉಡುಗೊರೆಗಳನ್ನು ಹಂಚುವ ಕೆಲಸ ಮುಂದುವರೆದಿದೆ. ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತುಗಳು ಮುಂದುವರೆದಿವೆ.

ಕೋಲಾರ ತಾಲ್ಲೂಕಿನ ಹೋಳೂರು ಹೋಬಳಿಗೆ ಕಾಂಗ್ರೇಸ್ ಬೆಂಬಲಿತರಾಗಿ ಸೀಸಂದ್ರ ಗೋಪಾಲಗೌಡ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಯಿಂದ ಬ್ಯಾಲಹಳ್ಳಿ ಶಂಕರೇಗೌಡ ಮತ್ತು ವಡಗೂರು ಡಿ.ವಿ.ಹರೀಶ್ ಈ ಇಬ್ಬರು ಅಭ್ಯರ್ಥಿಗಳಾಗಲು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಡಿವಿ.ಹರೀಶ್ ಮಾಜಿ ನಿರ್ದೇಶಕನಾಗಿದ್ದು, ಸಂಸದ ಎಂ.ಮಲ್ಲೇಶ್‌ಬಾಬು ಸೇರಿದಂತೆ ಜೆಡಿಎಸ್ ಕೆಲವು ಮುಖಂಡರು ಹರೀಶ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಬ್ಯಾಲಹಳ್ಳಿ ಶಂಕರೇಗೌಡರ ಪರವಾಗಿ ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸೇರಿದಂತೆ ಹೋಳೂರು ಹೋಬಳಿಯ ಜೆಡಿಎಸ್ ಮುಖಂಡರು ಶಂಕರೇಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗುವುದು ಖಚಿತವಾಗಿದೆ.

ಕೋಲಾರ ತಾಲ್ಲೂಕಿನ ಉಳಿದ ೨ ಕ್ಷೇತ್ರಗಳಲ್ಲಿ ವೇಮಗಲ್ ಕ್ಷೇತ್ರದಿಂದ ಕಾಂಗ್ರೇಸ್ ಬೆಂಬಲಿತರಾಗಿ ಚಂಜಿಮಲೆ ರಮೇಶ್ ರವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯಿಂದ ಇನ್ನು ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿದೆ. ಜನಘಟ್ಟ ವೆಂಕಟಮುನಿಯಪ್ಪನವರ ಸಹೋದರ ಕೃಷ್ಣಪ್ಪನವರನ್ನು ಕಣಕ್ಕಿಳಿಸಲು ಸಿದ್ಧತೆಯಲ್ಲಿ ತೊಡಗಿದ್ದಾರೆ.

ವಕ್ಕಲೇರಿ ಕ್ಷೇತ್ರದಿಂದ ಕಾಂಗ್ರೇಸ್ ಬೆಂಬಲಿತರಾಗಿ ಸೋಮಣ್ಣ ರವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯಿಂದ ಅಭ್ಯಾರ್ಥಿ ಘೋಷಣೆಯಾಗಬೇಕಾಗಿದೆ.

ಶ್ರೀನಿವಾಸಪುರ ತಾಲ್ಲೂಕಿನ ೨ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಂಗ್ರೇಸ್ ಬೆಂಬಲಿತರಾಗಿ ಹನುಮೇಶ ಮತ್ತು ಕೆ.ಕೆ.ಮಂಜುನಾಥ್ ಅಭ್ಯರ್ಥಿಗಳಾಗಿ ಘೋಷಣೆಯಾಗಿದ್ದಾರೆ. ಜೆಡಿಎಸ್. ಬೆಂಬಲಿತರಾಗಿ ಮಾಜಿ ನಿರ್ದೇಶಕ ಪಾಳ್ಯ ಬೈರಾರೆಡ್ಡಿ ಮತ್ತು ವಕೀಲ ಮುರಳೀಧರ ರವರ ಪತ್ನಿ ಎಲ್.ಶಶಿಕಲಾ ಅಭ್ಯರ್ಥಿಗಳಾಗಿ ಘೋಷಣೆ ಆಗಿದ್ದು, ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ೨ ಕ್ಷೇತ್ರಗಳಿಗೆ ೨ ಪಕ್ಷಗಳಿಂದ ಅಭ್ಯರ್ಥಿಗಳ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಜೆಡಿಎಸ್ ನಿಂದ ಮಾಜಿ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಶ್ಯಾಮೇಗೌಡ ಅಭ್ಯರ್ಥಿಗಳಾಗಿದ್ದು, ಕಾಂಗ್ರೇಸ್ ನಿಂದ ರಾಜೇಂದ್ರಗೌಡ ಹಾಗೂ ಸರ್ವಜ್ಞಗೌಡ ಈ ಇಬ್ಬರು ಅಭ್ಯರ್ಥಿಗಳಾಗಿ ಆಯ್ಕೆ ಆಗುವುದು ಖಚಿತವಾಗಿದೆ. ಕಲ್ಲಪಲ್ಲಿ ಪ್ರಕಾಶ್ ತಾನು ಅಭ್ಯರ್ಥಿಯಾಗಬೇಕೆಂದು ಹೈಕಮ್ಯಾಂಡ್ ಮೇಲೆ ಒತ್ತಡ ತರುತ್ತಿದ್ದಾರೆ.

ಬಂಗಾರಪೇಟೆ ಮತ್ತು ಕೆ.ಜಿ.ಎಫ್.ಗೆ ತಲಾ ಒಂದೊAದು ಕ್ಷೇತ್ರ ಇರುವುದರಿಂದ ಬಂಗಾರಪೇಟೆಯಿAದ ಕಾಂಗ್ರೇಸ್ ಬೆಂಬಲಿತರಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಭ್ಯರ್ಥಿಯಾಗಲಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿ ಮಾರ್ಕೋಂಡೇಗೌಡರನ್ನು ಕಣಕ್ಕಿಳಿಸಲು ಜೆಡಿಎಸ್ ಮತ್ತು ಬಿಜೆಪಿ ಮುಂದಾಗಿದೆ.

ಕೆ.ಜಿ.ಎಫ್.ಕ್ಷೇತ್ರದಿಂದ ಮಾಜಿ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಅಭ್ಯರ್ಥಿಯಾಗಲಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿ ಆ.ಮ. ಲಕ್ಷಿö್ಮÃನಾರಾಯಣರನ್ನು ಕಣಕ್ಕಿಳಿಸಲು ಒಂದು ಗುಂಪು ಸಿದ್ಧತೆ ನಡೆಸಿದೆ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗಳೇ ಮುಖ್ಯವಾಗಿದೆ.

ಮಾಲ್ಲೂರು ಕ್ಷೇತ್ರದಿಂದ ಕಾಂಗ್ರೇಸ್ ಬೆಂಗಲಿತರಾಗಿ ಶಾಸಕ ಕೆ.ವೈ.ನಂಜೇಗೌಡ ಮತ್ತು ಮಲ್ಲಪ್ಪನಹಳ್ಳಿ ಶ್ರೀನಿವಾಸ್‌ಗೌಡ ಅಭ್ಯರ್ಥಿಯಾಗಲಿದ್ದಾರೆ. ಶಾಸಕರ ಬೆಂಬಲಿಗರೇ ಆದ ಜ್ಞಾಪಸಂದ್ರ ನಾರಾಯಣಗೌಡ, ದೊಡ್ಡಶಿವಾರ ಹನುಮಂತರೆಡ್ಡಿ ಮತ್ತು ಅಂಬರೀಷ್‌ಗೌಡ ಇವರು ಅಭ್ಯರ್ಥಿಗಳಾಗಬೇಕೆಂದು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಜೆಡಿಎಸ್ ಬೆಂಬಲಿತರಾಗಿ ಕೆ.ವೈ.ನಂಜೇಗೌಡರ ವಿರುದ್ದ ಮಾಜಿ ಕೋಚಿಮುಲ್ ಅಧ್ಯಕ್ಷ ಎ.ವಿ.ಪ್ರಸನ್ನ ಕಣಕ್ಕಿಳಿಯಲಿದ್ದಾರೆ. ಉಳಿದ ಮೊತ್ತೊಂದು ಕ್ಷೇತ್ರಕ್ಕೆ ಕಾಂಗ್ರೇಸ್ ನಲ್ಲಿ ಟಿಕೇಟ್ ಬಯಸಿರುವರಲ್ಲಿ ಟಿಕೇಟ್ ಸಿಗದೆ ವಂಚಿತರಾದವರನ್ನು ತಮ್ಮ ಕಡೆ ಸೆಳೆದುಕೊಂಡು ಅಭ್ಯರ್ಥಿಯನ್ನಾಗಿ ಮಾಡಲು ಜೆಡಿಎಸ್ ಮತ್ತು ಬಿಜೆಪಿ ಕಾದುನೋಡುವ ತಂತ್ರದಲ್ಲಿ ಇದ್ದಾರೆ.

ಜೂ.೯ ರಂದು ಚುನಾವಣಾ ವೇಳಾಪಟ್ಟಿ ಪ್ರಕಟಣೆಯಾದ ನಂತರ ನಾಮಪತ್ರ ಸಲ್ಲಿಸುವ ವೇಳೆಗೆ ಅಧಿಕೃತ ಅಭ್ಯರ್ಥಿಗಳು ಘೋಷಣೆಯಾಗಿ ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ. ಅಲ್ಲಿಯ ತನಕವೂ ಅಭ್ಯರ್ಥಿಗಳ ಆಯ್ಕೆಗಾಗಿ ಕೆಲವರು ಕಸರತ್ತುಗಳನ್ನು ಮುಂದುವರೆಸುತ್ತಲ್ಲೇ ಇರುತ್ತಾರೆ.

೨ ಮಹಿಳಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಆಗಬೇಕಾಗಿದ್ದು, ಇನ್ನು ಅಭ್ಯರ್ಥಿಗಳ ಆಯ್ಕೆ ಯಾವ ಪಕ್ಷದಿಂದಲೂ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

ಚಿತ್ರ ೦೭ ಕೆ.ಎಲ್.ಆರ್. ೦೧ : ಕೋಚಿಮುಲ್ ಕಛೇರಿ ಚಿತ್ರ