ನ್ಯೂಸ್

ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ೨೪ಕ್ಕೆ

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರಮಠದ ಶ್ರೀ ಜಗದ್ಗುರು ಗಂಗಾಧರ ಪ್ರೌಢಶಾಲೆಯ ೧೯೯೨-೯೩ ನೇ ಸಾಲಿನ ಹಳೇ ವಿದ್ಯಾರ್ಥಿಗಳ ವತಿಯಿಂದ ಮಠದ ಸಭಾಭವನದಲ್ಲಿ ಜುಲೈ ೨೪ರಂದು ಬೆಳಗ್ಗೆ ೧೦.೩೦ಕ್ಕೆ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಗುರುವಂದನಾ ಸಮಿತಿ ಅಧ್ಯಕ್ಷ ವಿಠ್ಠಲ ಬೆಳಂಕರ ಅವರು, ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಾಧ್ಯಾಪಕಿ ಅಂಜಲಿ ಕರಬಸಣ್ಣವರ ಅಧ್ಯಕ್ಷತೆ ವಹಿಸುವರು ಎಂದರು.
೯೨-೯೩ ನೇ ಸಾಲಿನಲ್ಲಿ ಕಲಿಸಿದ ಸುಮಾರು ೧೭ ಶಿಕ್ಷಕರಿಗೆ ಸನ್ಮಾನ ಮಾಡಲಾಗುವುದು. ಶಾಲೆಗೆ ಬೇಕಾದ ವಸ್ತುಗಳನ್ನು ಮುಂದಿನ ದಿನಗಳಲ್ಲಿ ಕೊಡುಗೆ ನೀಡುವ ಆಶಯ ಇದೆ. ಮುಖ್ಯವಾಗಿ
ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಈಗಾಗಲೇ ನಮ್ಮ ಬ್ಯಾಚಿನ ೧೩೦ ಜನರು ಸಂಪರ್ಕಕ್ಕೆ ಸಿಕ್ಕಿದ್ದಾರೆ. ಇನ್ನುಳಿದ ಸದಸ್ಯರು ಸಹ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ಮೈಸೂರು ಚೆನ್ನೈ ಅಲ್ಲದೇ ಅಮೆರಿಕೆಯಿಂದಲೂ ಸ್ನೇಹಿತರು ಬೆಂಬಲ ವ್ಯಕ್ತ ಪಡಿಸಿ ಅನೇಕರು ಆಗಮಿಸುತ್ತಿದ್ದಾರೆ ಎಂದರು. ಹುಲ್ಲೇಂದ್ರ ಪವಾರ. ಸುಧೀರ ಭೂಸನೂರ. ಪ್ರಕಾಶ ಹಬೀಬ. ಆನಂದ ಬಾಕಳೆ. ಸುನಿಲ ಮಿಸ್ಕಿನ. ನಂದೀಶ ಶಾಂತಯ್ಯನಮಠ ಗೋಷ್ಠಿಯಲ್ಲಿದ್ದರು.