ನ್ಯೂಸ್

ಹಳೆಯಂಗಡಿ ಸರ್ಕಾರಿ ಬಸ್ ಪರಸ್ಪರ ಡಿಕ್ಕಿ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಕೆನರಾ ಬ್ಯಾಂಕ್ ಎದುರುಗಡೆ ಸರ್ಕಾರಿ ಬಸ್ಸುಗಳ ನಡುವೆ ಅಪಘಾತ ನಡೆದಿದ್ದು, ಹನ್ನೆರಡು ಜನ ಗಾಯಗೊಂಡ ಘಟನೆ ಬೆಳಗ್ಗೆ ನಡೆದಿದೆ. ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಬಳಿ ಮಂಗಳೂರು ಡಿಪೋ ಸರ್ಕಾರಿ ಬಸ್ಸಿನ (ಕೆ ಎ 19 ಎಫ್3376)ಹಿಂಭಾಗಕ್ಕೆ ಉತ್ತರ ಕರ್ನಾಟಕ ದ ಸರ್ಕಾರಿ ಬಸ್(ಕೆ17 f19 28)ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಂಗಳೂರು ಡಿಪೋ ಬಸ್ಸು ಹೆದ್ದಾರಿಯಿಂದ ಚರಂಡಿಗೆ ಸರಿದಿದ್ದು, ಸ್ಥಳೀಯ ರಿಕ್ಷಾ ಚಾಲಕ ಯೋಗೀಶ್ ಎನ್ನುವವರು ತಕ್ಷಣ ಸ್ಥಳಕ್ಕೆ ಆಂಬುಲೆನ್ಸ್ ತರಿಸಿ ಗಾಯಾಳುಗಳು ಅಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ಗಾಯಾಳುಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಅಪಘಾತದ ರಭಸಕ್ಕೆ 2 ಬಸ್ಸುಗಳಿಗೆ ಹಾನಿಯಾಗಿದ್ದು, ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ