ನ್ಯೂಸ್

ಹಲಕರ್ಟಿ ಘಟನೆ ರಾಜಕೀಯ ಬೆರಸಬೇಡಿ

ಖರ್ಗೆ ಅವರಿಂದಲೇ ಲಿಂಗಾಯತರಿಗೆ ನ್ಯಾಯ ಮರತೂರ ಹೇಳಿಕೆ | ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ವಿಶ್ವ ಗುರು ಬಸವೇಶ್ವರರ ಭಾವಚಿತ್ರಕ್ಕೆ ಅಪಮಾನ ಮಾಡಿದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಹೀಗಾಗಿ ಈ ವಿಷಯಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದು ಜಿಪಂ ಮಾಜಿ ವಿರೋಧ ಪಕ್ಷದ ನಾಯಕರಾಗಿರುವ ಶಿವಾನಂದ ಪಾಟೀಲ್ ಮರತೂರ ತಿಳಿಸಿದ್ದಾರೆ.
ಶಹಾಬಾದ ತಾಲೂಕಿನ ಮುತ್ತಗಾದಲ್ಲಿ ಕಂಠಿಬಸವೇಶ್ವರ ದೇವಾಲಯದಲ್ಲಿ ವಿಗ್ರಹ ಭಗ್ನಗೊಳಿಸಿದ್ದನ್ನು ಖಂಡಿಸಿದ್ದಾರೆ. ಈ ಎರಡು ಘಟನೆ ಕುರಿತು ಈಗಾಗಲೇ ಕ್ಷೇತ್ರದ ಶಾಸಕರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಎಸ್ಪಿ ಇನ್ನಿತರ ಹಿರಿಯ  ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಆರೋಪಿತರ ಬಂಧನಕ್ಕೆ ಸೂಚನೆ ನೀಡಿದ್ದಾರೆ. ಹೀಗಾಗಿ ಬಸಣ್ಣನವರ ಅನುಯಾಯಿಗಳು ಹಾಗೂ ವೀರಶೈವ-ಲಿಂಗಾಯತ ಸಮಾಜದವರು ನಡೆಸುತ್ತಿರುವ ಹೊರಾಟ ಕೈಬಿಡುವಂತೆ ಕೋರಿದ್ದಾರೆ.
ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇವೆ. ಆರೋಪಿಗಳನ್ನು ಬಂಧಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಕಿಡಿಗೇಡಿಗಳನ್ನು ಪತೆ ಮಾಡುವುದು ಕೊಂಚ ವಿಳಂಬವಾಗಿದೆ. ಸಮಾಜ ಬೇಡಿಕೆಗಳನ್ನು  ಈಡೇರಿಸಲು ಸರ್ಕಾರ ಮತ್ತು ಸಚಿವರು ಸಿದ್ಧರಿದ್ದಾರೆ. ಲಿಂಗಾಯತರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದೆ ಕಾಂಗ್ರೆಸ್ ಎಂದು ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಾಗಲಿ, ಅಥವಾ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದಲೇ ಲಿಂಗಾಯತ ಸಮಾಜಕ್ಕೆ ನ್ಯಾಯ ದೊರಕಿದೆ. ಲಿಂಗಾಯತರನ್ನು ಬೆಳೆಸಿದ್ದಾರೆ. ಅಲ್ಲದೆ ಈ ಸಲ  ಈ ಭಾಗದ ಮೂವರು ಲಿಂಗಾಯತರಿಗೆ ಸಚಿವರನ್ನು ಮಾಡಿದ್ದಾರೆ. ಹಿಂದೆ ಒಬ್ಬರು ಇರಲಿಲ್ಲ ಎಂದು ಮರತೂರ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾಗಿರುವ ನಾಗರೆಡ್ಡಿ ಪಾಟೀಲ್ ಕರದಾಳ ಅವರ ಕುರಿತು  ಹಗುರವಾಗಿ ಮಾತನಾಡಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರಿಗೆ ಬುದ್ದಿ ಭ್ರಮಣೆಯಾಗಿರುವಂತಿದೆ. ಬಸವ ಜಯಂತಿಯನ್ನು ಚಂದಾಪಟ್ಟಿ ಎತ್ತಿ ಮಾಡಿಲ್ಲ. ಹೀಗೆ ಇಲ್ಲದ್ದನ್ನು ಮಾತನಾಡುವುದನ್ನು ಮೊದಲು ನಿಲ್ಲಿಸಲಿ ಎಂದು ಎಚ್ಚರಿಸಿದ್ದಾರೆ.