ಹೊರನಾಡಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕೀರ್ತನ ಕಲಾ ಸಮ್ಮೇಳನವನ್ನು ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಉದ್ಘಾಟಿಸಿದರು. ಎಸ್.ಎಲ್.ಲೋಕೇಶ್, ಚನ್ನರಾಯಪಟ್ಟಣ, ಕೀರ್ತನಾಚಾರ್ಯ ಇತರರಿದ್ದರು. 
ನ್ಯೂಸ್

ಹರಿಕಥೆಯಿಂದ ಸಮಾಜಕ್ಕೆ ಉತ್ತಮ ಸಂದೇಶ

ಕಳಸ: ಮಾನಸಿಕ ದುಃಖಗಳಿಂದ ಹೊರಬರಲು ಸಾಂಸ್ಕೃತಿಕ ಕಾರ್ಯಕ್ರಮ ಪೂರಕ ಎಂದು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಹೇಳಿದರು.

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಇವರ ಆಶ್ರಯದಲ್ಲಿ ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ ಬೆಂಗಳೂರು ಇವರ ಸಹಕಾರದಲ್ಲಿ ಹೊರನಾಡಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕೀರ್ತನ ಕಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಹರಿಕಥೆಯನ್ನು ಹಗುರವಾಗಿ ಕಾಣುವಂತಹ ವ್ಯವಸ್ಥೆ ಆಗಬಾರದು. ಹರಿಕಥೆ ಇನ್ನೊಬ್ಬರ ಬದುಕನ್ನು ಹಾಳು ಮಾಡುವುದಕ್ಕೆ ಅಲ್ಲ. ಇನ್ನೊಬ್ಬರ ಜೀವನವನ್ನು ಸರಿ ಮಾಡುವುದಕ್ಕೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಹ ವ್ಯವಸ್ಥೆ ಹರಿಕಥೆಯಾಗಿದೆ. ಹರಿಕಥೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಕೆ.ಮಹಾಬಲ ಭಟ್ ಮಂಗಳೂರು, ಎನ್.ಆರ್.ಜ್ಞಾನಮೂರ್ತಿ ಕೋಲಾರ, ಶೀಲಾ ನಾಯ್ಕ ಬೆಂಗಳೂರು, ಮಾಲಿನಿ ಮೈಸೂರು, ವಸಂತಲಕ್ಷ್ಮೀ ಮೈಸೂರು, ವೀಣಾ ಮೈಸೂರು ಇವರಿಗೆ ದಾಸಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಾಸ ಶ್ರೇಷ್ಠರು ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ ಬೆಂಗಳೂರು ಅಧ್ಯಕ್ಷ ಎಸ್.ಎಲ್.ಲೋಕೇಶ್‌ದಾಸರು ಚನ್ನರಾಯಪಟ್ಟಣ, ಕೀರ್ತನಾಚಾರ್ಯ, ಡಾ. ಲಕ್ಷ್ಮಣದಾಸ ತುಮಕೂರು ಇದ್ದರು.