ನ್ಯೂಸ್

ಹನ್ನೇರಡನೆ ಶತಮಾನದಲ್ಲಿ ದೊರೆಯಿತು ಮಹಿಳೆಯರಿಗೆ ಪ್ರಾಮುಖ್ಯತೆ

ಚಿತ್ರದುರ್ಗ: ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆಂದು ಶ್ರೀ ಮುರುಘಾಮಠದ ಆಡಳಿ ತಾಧಿಕಾರಿ,ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಹೇಳಿದರು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸೋಮವಾರ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು,12ನೇ ಶತಮಾನದಲ್ಲಿ ಮ ಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು. ಕುಟುಂಬದ ಜವಾಬ್ದಾರಿ ಮಹಿಳೆಯರ ಮೇಲಿದೆ.
ಶ್ರೀ ಮಠದ ಸಿಬ್ಬಂದಿ ವೇತನ ಹೆಚ್ಚಿಸುವ ಜವಾಬ್ದಾರಿ ನಿಬಾಯಿಸಲಾಗಿದೆ. ಮಠದ ಸಿಇಒ ಎಂ.ಭರತ್‌ಕುಮಾರ್ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ವಿಜಯ ಕೆ.ಮಠ ಅವರು ಈ ಯೋಜನೆಗೆ ಸಹಕಾರ ನೀಡಿದ್ದಾರೆ. ಸಾರ್ವಜನಿಕರ ಹಣ ಸಾರ್ವಜನಿಕರಿಗೆ ಮೀಸ ಲು.ಶರಣ ಸಂಸ್ಕೃತಿ ಉಳಿಸಬೇಕಿದೆ. ಸತ್ಯ ನಿಷ್ಠೆಯಿಂದ ಕೆಲಸ ಮಾಡುವವರು ಬೇಕಿದೆ. ಆಡಳಿತಾಧಿಕಾರಿಯಾಗಿ ಉತ್ತಮ ಸೇವೆ ಮಾಡು ತ್ತೇನೆ ಎಂದರು.
ಲೈಂಗಿಕ ಅಲ್ಪಸಂಖ್ಯಾತರ ಪರ ಹಕ್ಕುಗಳ ಹೋರಾಟಗಾರ್ತಿ ಡಾ.ಅಕ್ಕೈಪದ್ಮಶಾಲಿ ಅವರು ಮಾತನಾಡಿ,ಲಿಂಗತ್ವದ ಆಧಾರದ ಮೇಲೆ ಸಮಾಜದಲ್ಲಿ ಶೋಷಣೆ ಅನುಭವಿಸುತ್ತಿರುವ ನಮ್ಮಂತವರನ್ನು ನ್ಯಾಯಾಧೀಶೆ ರೇಖಾ ಅವರು ಗುರುತಿಸಿ ಗೌರವಿಸಿರುವುದು ಹರ್ಷ ತ ರಿಸಿದೆ. ಸಾಂಸ್ಕೃತಿಕ ಚೌಕಟ್ಟಿನಿಂದ ನಮ್ಮನ್ನು ದೂರವಿಡಲಾಗಿದೆ. ನಮ್ಮಗಳದು ನಿಷ್ಕಲ್ಮಷ ಮನಸ್ಸು. ಮಹಿಳೆಯರನ್ನು ಶೋಷಿಸುವಂಥವರಿಗೆ ಧಿಕ್ಕಾರ ಹೇಳ ಬೇಕಿದೆ. ಸಮಾಜದಲ್ಲಿ ಶೋಷಿತರ ಜೀವನದಲ್ಲಿ ಸುಧಾರಣೆ ತರಲು ಶ್ರಮಿಸುತ್ತೇವೆ ಎಂದರು.
‘ವಚನಕಾರ್ತಿಯರ ಅರಿವಿನ ನೆಲೆಗಳು’ವಿಷಯಾವಲೋಕನ ಮಾಡಿದ ಚಿಂತಕಿ ಡಾ.ಶುಭಾಮರವಂತೆ ಮಾತನಾಡಿ,ಬಸವಾದಿ ಪ್ರಮಥರು ಕ್ರಾಂತಿಗೆ ಕಾರಣರಾದರು. 12ನೇ ಶತಮಾನ ದಲ್ಲಿ ಬಸವಾದಿ ಶರಣರು ಸ್ತ್ರೀಯರಿಗೆ ನೀಡಿದ್ದ ಮುಕ್ತ ಸ್ವಾತಂತ್ರ್ಯವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ಮುಂದುವರಿಸಿದರು.
ವೈಚಾರಿಕ,ಆರ್ಥಿಕ ಬದುಕನ್ನು ಮಹಿಳೆಯರು ಕಟ್ಟಿಕೊಳ್ಳಬೇಕಿದೆ. ಹೆಣ್ಣು ವಿವೇಕದ ಪ್ರತಿನಿಧಿ. 33 ವಚನಗಾರ್ತಿಯರ 1365 ವಚನ ಗಳು ಜ್ಞಾನಭಂಡಾರ ಅನುಭವ ಮಂಟಪದ ಮೂಲಕ ಬೆಳಕಿಗೆ ಬಂದಿದೆ. ಶರಣಶರಣೆಯರ ವೈಚಾರಿಕ ದಾರಿಯಲ್ಲಿ ಮಹಿಳೆಯರು ಸಾಗಿದರೆ ರಾಜಕೀಯ,ಧಾರ್ಮಿಕ,ಆರ್ಥಿಕ ಮೊದಲಾದ ಎಲ್ಷ ಕ್ಷೇತ್ರಗಳಲ್ಲೂ ಮುಂದುವರೆಯಲು ಸಾಧ್ಯವಾಗಲಿದೆ ಎಂದರು.
ವೈದ್ಯೆ ಡಾ.ಜಿ.ಬಿ.ಶಿಲ್ಪಾ,ಅ.ಭಾ.ವಿ.ಮ.ಉದ್ಯ ಮಿಗಳ ಘಟಕದ ರಾಜ್ಯಾಧ್ಯಕ್ಷೆ ಕೆ.ಸಿ.ವೀಣಾಸುರೇಶ್‌ಬಾಬು ಮಾತನಾಡಿದರು. ಮಾಜಿ ಸಚಿವ ಎಚ್.ಆಂಜನೇಯ,ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ,ಕಾರ್ಯಾಧ್ಯಕ್ಷಕೆ.ಸಿ.ನಾ ಗರಾಜ್,ಉಸ್ತುವಾರಿ ಶ್ರೀ ಬಸವಪ್ರಭುಸ್ವಾಮೀಜಿ,ಬಸವತತ್ತ್ವಪ್ರಸಾರಕಿರಾದ ಬೀದರ್‌ನ ಶರಣೆ ಸತ್ಯಕ್ಕ,ಎಸ್‌ಜೆಎಂ ವಿದ್ಯಾಪೀಠದ ಸಿಇಒ ಎಂ.ಭರತ್‌ಕುಮಾರ್, ರೇಷ್ಮೇ ಮಾರಾಟ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ,ಮಾಯಾ ಎಸ್.ನಾಯಕ್,ಅಜೀದಾಬೇಗಂ ಇತರರು ಇದ್ದರು.
ಸಮಾಜ ಸೇವಕಿ ಕೆ.ಅರ್ಪಿತಾ ಹಾಗೂ ಸಿ.ಪಿ.ಗಾನಶ್ರೀ ಅವರನ್ನು ಸನ್ಮಾನಿಸಲಾಯಿತು.ಬಾಪೂಜಿ ವಿದ್ಯಾಸಂಸ್ಥೆ,ಎಸ್‌ಜೆಎಂ ನರ್ಸಿಂಗ್ ಕಾಲೇಜು,ದೊಡ್ಡಸಿದ್ದವ್ವನಹಳ್ಳಿ ಜ್ಞಾನಪೂರ್ಣ ಸಂಸ್ಥೆ ಹಾಗೂ ಎಸ್‌ಜೆಎಂ ಮಹಿಳಾ ಮಹಾವಿದ್ಯಾಲಯ ವಿದ್ಯಾರ್ಥಿಗಳು ನೃತ್ಯಪ್ರದರ್ಶನ, ಸಾಂಸ್ಕೃತಿಕ ಸಂಭ್ರಮದಲ್ಲಿ ಮಜಾಟಾಕೀಸ್ ರೆಮೋ ತಂಡದವರು ಗಾಯನ ಕಾರ‌್ಯಕ್ರಮ ನಡೆಸಿಕೊಟ್ಟರು. ಜಮುರಾ,ಗಾನಯೋಗಿ ಕಲಾವಿದರು ಪ್ರಾರ್ಥಿಸಿದರು. ರುದ್ರಾಣಿ ಗಂಗಾಧರ್ ಸ್ವಾಗತಿಸಿ,ಅನುಲಿಂಗರಾಜ್ ನಿರೂಪಿಸಿದರು.

ಕೋಟ್
ಬಸವಾದಿ ಶರಣರು ಸಮ ಸಮಾಜದ ಪರಿಕಲ್ಪನೆ ಕಟ್ಟಿಕೊಟ್ಟರು. ಸತಿಪತಿಯರು ಅನ್ಯೋನ್ಯವಾಗಿದ್ದಾರೆ ಸಂಸಾರ ಸರಿದಾರಿಯಲ್ಲಿ ಸಾ ಗುತ್ತದೆ. ಮಾಧ್ಯಮಗಳು ಜನರ ಜೀವನ ಪರಿವರ್ತನೆಗೆ ಕಾರಣವಾಗುತ್ತಿವೆ. ನ್ಯಾಯಾಲಯಗಳು ಹೆಚ್ಚಿನ ಜವಾಬ್ದಾರಿಯನ್ನು ಹೆಚ್ಚಿನ ಜ ವಾಬ್ದಾರಿಯನ್ನು ನಿರ್ವಹಿಸುತ್ತಿವೆ. ಮಹಿಳಾ ವಕೀಲರ ಸಹಿತ ಅನೇಕರ ಸಾಧಕಿಯರಿಂದು ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದ್ದಾರೆ.
ಎಚ್.ಆಂಜನೇಯ,ಮಾಜಿ ಸಚಿವ.

ಇದ್ದರು.