ಒಂದೇ ದಿನ 87,475 ಮಾದರಿಗಳ ಪರೀಕ್ಷೆ : 10,453 ಸೋಂಕು ಪ್ರಕರಣ ವರದಿ
ಬೆಂಗಳೂರು : ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹತ್ತು ಸಾವಿರಕ್ಕೂ ಹೆಚ್ಚು ಕರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 6 ಲಕ್ಷ ಗಡಿ ಸಮೀಪಿಸಿದೆ. ಕಳೆದ 24 ಗಂಟೆಗಳಲ್ಲಿ 10,453 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 5,92,911ಕ್ಕೆ ಏರಿಕೆಯಾಗಿದೆ. ಈ ಹಿಂದೆ (ಸೆ. 13ರಂದು) 9,894 ಪ್ರಕರಣಗಳು ವರದಿಯಾಗಿತ್ತು.
ಕೆಲ ದಿನಗಳಿಂದ ಸೋಂಕಿತರು ಹಾಗೂ ಗುಣಮುಖರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಸಾವಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ ಮಂಗಳವಾರ ಸೋಂಕಿತರೊಂದಿಗೆ ಮೃತರ ಸಂಖ್ಯೆಯೂ ಏರಿಕೆಯಾಗಿದೆ. 136 ಮಂದಿ ಸಾವಿನೊಂದಿಗೆ ಈವರೆಗೂ 8,777 ಮಂದಿ ಸೋಂಕಿಗೆ ಬಲಿಯಾಗಿರುವುದು ಆತಂಕ ಹೆಚ್ಚಿಸಿದೆ. ಇನ್ನು ಆಸ್ಪತ್ರೆಯಿಂದ ಬಿಡುಗಡೆ ಹೊಂದುವವರ ಸಂಖ್ಯೆ 6,628 ಕಡಿಮೆಯಾಗಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ 1.07 ಲಕ್ಷಕ್ಕೆ ಏರಿಕೆಯಾಗಿದೆ. ಈ ಪೈಕಿ 815 ಸೋಂಕಿತರ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಹೆಚ್ಚಿದ ಪರೀಕ್ಷೆ ಸಂಖ್ಯೆ
ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಸೋಂಕು ಪ್ರಕರಣಗಳು ಹೆಚ್ಚು ದೃಢಪಟ್ಟಿವೆ. 45,141 ರ‌್ಯಾಪಿಡ್ ಆ್ಯಂಟೀಜನ್ ಟೆಸ್ಟ್ ಹಾಗೂ 42,334 ಆರ್‌ಟಿಪಿಸಿಆರ್ ಪರೀಕ್ಷೆ ಸೇರಿದಂತೆ ಒಂದೇ ದಿನ 87,475 ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 10,453 ಸೋಂಕು ಪ್ರಕರಣಗಳು ವರದಿಯಾಗಿವೆ.
ಎಲ್ಲೆಲ್ಲಿ ಹೊಸ ಪ್ರಕರಣಗಳು?
ಚಿಕಿತ್ಸೆ ಪಡೆಯುತ್ತಿರುವವರು -1,07,737
ಗುಣಮುಖರಾದವರು - 4,76,378
ಅನ್ಯಕಾರಣದಿಂದ ಸಾವು - 19
ಮೃತಪಟ್ಟವರು - 8,777
ಒಟ್ಟು ಸೋಂಕಿತರು - 5,92,911
ಪರೀಕ್ಷಿಸಿದ ಮಾದರಿಗಳು - 48,06,197
ನಿಗಾದಲ್ಲಿರುವವರು - 1,66,819
ಬಾಕ್ಸ್