ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಳಸ ವಲಯದ ಬಸ್ರಿಕಲ್ ಕಾರ್ಯಕ್ಷೇತ್ರದಲ್ಲಿ ಅರಣ್ಯ ಕಾರ್ಯಕ್ರಮದಡಿ ಹಣ್ಣುಗಳ ಗಿಡ ವಿತರಣೆ ಮತ್ತು ಗಿಡ ನಾಟಿ ಕಾರ್ಯಕ್ರಮ ನಡೆಯಿತು. ಸುರೇಶ್, ಸುಧಾಕರ್, ರವಿಚಂದ್ರ, ಹರೀಶ್, ರಾಜಪ್ಪ ಇತರರಿದ್ದರು. 
ನ್ಯೂಸ್

ಹಣ್ಣುಗಳ ಗಿಡ ವಿತರಣೆ

ಕಳಸ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಕಳಸ ವಲಯದ ಬಸ್ರಿಕಲ್ ಕಾರ್ಯಕ್ಷೇತ್ರದ ಜೋಗಿಕುಂಬ್ರಿಯಲ್ಲಿ ಗುರುವಾರ ಗ್ರಾಮದ ಯೋಜನೆಯ ಪಾಲುದಾರ ಸದಸ್ಯರುಗಳಿಗೆ ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿ ಹಣ್ಣುಗಳ ಗಿಡ ವಿತರಣೆ ಮತ್ತು ಗಿಡ ನಾಟಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಸುರೇಶ್ ಮಾತನಾಡಿ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯ. ಪ್ರಾಕೃತಿಕ ಸಂಪತ್ತು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಹೇಳಿದರು. ಒಕ್ಕೂಟದ ಅಧ್ಯಕ್ಷ ಸುಧಾಕರ್, ಕೃಷಿ ಮೇಲ್ವಿಚಾರಕ ರವಿಚಂದ್ರ, ಕಳಸ ವಲಯದ ಮೇಲ್ವಿಚಾರಕ ಹರೀಶ್, ಊರಿನ ಮುಖಂಡರಾದ ರಾಜಪ್ಪ, ಶೌರ್ಯ ವಿಪತ್ತಿನ ಸದಸ್ಯ ಸತೀಶ್, ಸ್ಥಳೀಯ ಸೇವಾಪ್ರತಿನಿಧಿ ವಿನುತಾ, ಒಕ್ಕೂಟದ ಸದಸ್ಯರು ಇದ್ದರು.