ನ್ಯೂಸ್

ಸ್ವರಸಂಕುಲ ಸಂಗೀತ ಸಭಾದಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

ಸ್ವರಸಂಕುಲ ಸಂಗೀತ ಸಭಾದಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

ಸ್ವರಸಂಕುಲ ಸಂಗೀತ ಸಭಾ ಕನ್ನಡಿ ಕ್ರಿಯೇಷನ್ಸ್ ಸಹಯೋಗದಲ್ಲಿ ‘ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ’ ಹಾಗೂ ಜಗನ್ನಾಥ ಶೆಣೈ ಮತ್ತು ಪಂಡಿತ್ ಇಂದೂಧರ ನಿರೋಡಿ ಅವರ ಕುರಿತು ತಯಾರಿಸಿರುವ ‘ಸಾಕ್ಷ್ಯಚಿತ್ರಗಳ ಬಿಡುಗಡೆ’ ಕಾರ್ಯಕ್ರಮವನ್ನು ನ.10 ರಂದು ಸಂಜೆ 5 ಗಂಟೆಗೆ ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಆಯೋಜಿಸಲಾಗಿದೆ.

ಪಂಡಿತ್ ರಾಮರಾವ್ ನಾಯಕ್ ಸ್ಮರಣಾರ್ಥವಾಗಿ ಪೂನಾದ ಪಂಡಿತ್ ನಿಶಾದ್ ಬಾಕ್ರೆಯವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಲಿದೆ. ಪಂಡಿತ್ ವೀರಭದ್ರಯ್ಯ ಹಿರೇಮಠ (ಹಾರ್ಮೋನಿಯಂ) ಹಾಗೂ ಭೀಮಾಶಂಕರ್ ಭಿದನೂರ್ (ತಬಲಾ) ಸಾಥ್ ನೀಡಲಿದ್ದಾರೆ.