ಕಡೂರು ಸಿಪಿಸಿ ಕಾಲನಿಯ ನಿವಾಸಿಗರಿಗೆ ಕಸ ಸಂಗ್ರಹ ಬುಟ್ಟಿ ವಿತರಿಸಲಾಯಿತು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮಂಜುಳಾ ಚಂದ್ರು, ಮರುಗುದ್ದಿ ಮನು, ಇಕ್ಬಾಲ್, ಸುಧಾ ಉಮೇಶ್, ಜ್ಯೋತಿ, ವಿಜಯಾಚಿನ್ನರಾಜು, ಪುಷ್ಪಾ ಇತರರಿದ್ದರು.  
ನ್ಯೂಸ್

ಸ್ವಚ್ಛತೆ ಕಾಪಾಡಲು ಆದ್ಯತೆ

ಕಡೂರು: ಭಾರತದ ಪ್ರತಿ ಪ್ರಜೆ ಕಾನೂನನ್ನು ಗೌರವಿಸುವುದು ಹಾಗೂ ಸಂವಿಧಾನದ ಆಶಯದಂತೆ ನಡೆಯುವುದು ಆದ್ಯ ಕರ್ತವ್ಯ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಪುರಸಭಾ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಾಂಗ್ರೆಸ್ ನುಡಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಶ್ರಮಿಕ ವರ್ಗಗಳಿಗೆ ಅನುಕೂಲ ಕಲ್ಪಿಸಿದೆ. ಪಟ್ಟಣದ ಅಭಿವೃದ್ಧಿ ಮತ್ತು ಸ್ವಚ್ಛತೆ ಕಾಪಾಡಲು ಪುರಸಭೆ ಆಡಳಿತ ಆದ್ಯತೆ ನೀಡಿದೆ ಎಂದರು.

ಪುರಸಭೆಯಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಬೇಕೆಂಬ ಆಶಯದೊಂದಿಗೆ ಶೀಘ್ರದಲ್ಲಿಯೇ ದಿನಾಂಕ ನಿಗದಿಪಡಿಸಿ ಪುರಸಭೆಯಿಂದ ನಮ್ಮ ನಡೆ ಸಾರ್ವಜನಿಕರ ಕಡೆೆ ಎಂಬ ಧ್ಯೇಯದೊಂದಿಗೆ ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳ ತಂಡದೊಂದಿಗೆ ತೆರಳಿ ವಾರ್ಡ್‌ನಲ್ಲಿ ಸಭೆಗಳನ್ನು ಆಯೋಜಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುವುದು ಎಂದರು.

ಸಿಪಿಸಿ ಕಾಲನಿಯ ನಿವಾಸಿಗಳಿಗೆ ಕಸ ಸಂಗ್ರಹಣೆ ಬುಟ್ಟಿಗಳ ವಿತರಣೆಗೆ ಚಾಲನೆ ನೀಡಲಾಯಿತು. ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಸೈಯಾದ್ ಯಾಸೀನ್, ಮರುಗುದ್ದಿಮನು, ಮೋಹನ್, ಗೋವಿಂದರಾಜು, ಸುಬ್ಬಣ್ಣ, ಪುಷ್ಪಲತಾ ಮಂಜುನಾಥ್, ಪದ್ಮಾ ಶಂಕರ್, ಸುಧಾ ಉಮೇಶ್, ಜ್ಯೋತಿ ಆನಂದ್, ಇಕ್ಬಾಲ್, ವಿಜಯಾ ಚಿನ್ನರಾಜು, ಹಾಲಮ್ಮ, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಪರಿಸರ ಅಭಿಯಂತರ ಶ್ರೇಯಸ್‌ಕುಮಾರ್, ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಮೂರ್ತಿ, ತಿಮ್ಮಯ್ಯ ಹಾಗೂ ಸಿಬ್ಬಂದಿ ಇದ್ದರು.