ಹಾಲಿವುಡ್‌ನಲ್ಲಿ ‘ಸ್ಪೈಡರ್ ಮ್ಯಾನ್’ ಕುರಿತಂತೆ ಹಲವು ಸಿನಿಮಾ, ಸರಣಿಗಳು ಬಂದಿವೆ. ಆದರೆ 2002ರಲ್ಲಿ ಹಾಲಿವುಡ್ ನಟ ಟೋಬಿ ಮೆಗ್‌ವೈರ್ ನಟಿಸಿದ್ದ ‘ಸ್ಪೈಡರ್‌ಮ್ಯಾನ್’ ವಿಶ್ವಾದ್ಯಂತ ಸದ್ದು ಮಾಡಿತ್ತು. ಬಳಿಕ 2004ರಲ್ಲಿ ‘ಸ್ಪೈಡರ್ ಮ್ಯಾನ್-2’ ಹಾಗೂ 2007ರಲ್ಲಿ ‘ಸ್ಪೈಡರ್ ಮ್ಯಾನ್-3 ತೆರೆ ಕಂಡವು. ನಂತರ ಟೋಬಿ, ‘ನಾನಿನ್ನು ‘ಸ್ಪೈಡರ್‌ಮ್ಯಾನ್’ ಆಗಲಾರೆ’ 2012ರಲ್ಲಿ ‘ಅಮೇಜಿಂಗ್ ಸ್ಪೈಡರ್ ಮ್ಯಾನ್’ ಆಗಿ ಆ್ಯಂಡ್ರೂ ಗಾರ್‌ಫೀಲ್ಡ್ ಎಂಟ್ರಿ ಕೊಟ್ಟರು. ಅದರ ಸೀಕ್ವೆಲ್ 2014ರಲ್ಲಿ ತೆರಕಂಡಿತ್ತು. ಆದರೆ, ಆ್ಯಂಡ್ರೂನನ್ನು ‘ಸ್ಪೈಡರ್‌ಮ್ಯಾನ್’ ಆಗಿ ಪ್ರೇಕ್ಷಕರು ಅಪ್ಪಿಕೊಳ್ಳಲಿಲ್ಲ. ಹೀಗಾಗಿ, ಬ್ರಿಟನ್ ಮೂಲದ ನಟ ಟಾಮ್ ಹಾಲ್ಯಾಂಡ್ 2017ರಲ್ಲಿ ‘ಹೋಮ್ ಕಮಿಂಗ್’ ಮೂಲಕ ಯುವ ‘ಸ್ಪೈಡರ್‌ಮ್ಯಾನ್’ ಆಗಿ ಪದಾರ್ಪಣೆ ಮಾಡಿದರು. ಮತ್ತೆ ಜೇಡಮಾನವನಿಗೆ ಥಿಯೇಟರ್‌ಗಳಲ್ಲಿ ಕೆಂಪುಹಾಸಿನ ಆಮಂತ್ರಣ ದೊರೆಯಿತು. ಬಳಿಕ ಟಾಮ್ ‘ಸ್ಪೈಡರ್‌ಮ್ಯಾನ್: ಾರ್ ್ರಮ್ ಹೋಮ್’, ‘ನೋ ವೇ ಹೋಮ್’ ಹೀಗೆ ಬ್ಯಾಕ್ ಟು ಬ್ಯಾಕ್ ಮೂರು ಚಿತ್ರಗಳಲ್ಲಿ ‘ಸ್ಪೈಡರ್‌ಮ್ಯಾನ್’ ಆಗಿ ಮಿಂಚಿದರು. ಮಾತ್ರವಲ್ಲ ‘ಅವೆಂಜರ್ಸ್’ ಸರಣಿ ಸೇರಿ ‘ಮಾರ್ವೆಲ್ ಸೂಪರ್‌ಹೀರೋ ಯೂನಿವರ್ಸ್’ನ ಹಲವು ಸಿನಿಮಾಗಳಲ್ಲಿ ‘ಸ್ಪೈಡರ್‌ಮ್ಯಾನ್’ ಆಗಿ ಕಾಣಿಸಿಕೊಂಡರು. ಹೀಗಾಗಿಯೇ ‘ಸ್ಪೈಡರ್‌ಮ್ಯಾನ್ 4’ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿತ್ತು. ಇದೀಗ ಆ ಕುರಿತು ಗುಟ್ಟು ಬಿಟ್ಟುಕೊಟ್ಟಿರುವ ಟಾಮ್, ‘ಮುಂದಿನ ಬೇಸಗೆ ವೇಳೆಗೆ ‘ಸ್ಪೈಡರ್‌ಮ್ಯಾನ್ -4’ ಶೂಟಿಂಗ್ ಆರಂಭಿಸಲಿದ್ದೇವೆ. ಎಲ್ಲವೂ ಅಂದುಕೊಂಡಂತೆ ಆಗುತ್ತಿದೆ’ ಎಂದಿದ್ದಾರೆ. ಆದರೆ, ಕಳೆದ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದ ಜಾನ್ ವಾಟ್ಸ್ ಈ ಬಾರಿ ಆ್ಯಕ್ಷನ್ -ಕಟ್ ಹೇಳುತ್ತಿಲ್ಲ. ಬದಲಾಗಿ ಕ್ರಿಸ್ಟೋರ್ ನೋಲನ್ ಪ್ರವೇಶಿಸಿದ್ದಾರೆ ಎನ್ನಲಾಗಿದೆ. -ಏಜೆನ್ಸೀಸ್