ನ್ಯೂಸ್

ಸ್ನೇಹಿತರ ಗಲಾಟೆ ಕೊಲೆಯಲ್ಲಿ ಅಂತ್ಯ

ಉದಯಗಿರಿ ಬೀಡಿ ಕಾಲನಿಯ ಕೆಸಿಬಿ ಸಮುದಾಯ ಭವನದ ಬಳಿ ಶುಕ್ರವಾರ ರಾತ್ರಿ ಸ್ನೇಹಿತರ ನಡುವೆ ಆರಂಭಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಉದಯಗಿರಿಯ ಮುದಾಸೀರ್ ಪಾಷ(38) ಕೊಲೆಯಾದವ. ಈತನನ್ನು ಸ್ನೇಹಿತ ರಿಜ್ವಾನ್, ಸಿಮೆಂಟ್ ಇಟ್ಟಿಗೆಯನ್ನು ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಶುಕ್ರವಾರ ರಾತ್ರಿ ಇಬ್ಬರು ಸಮುದಾಯ ಭವನದ ಆವರಣದಲ್ಲಿ ಮಲಗಿದ್ದು, ಇಬ್ಬರ ನಡುವೆ ಗಲಾಟೆಯಾಗಿದೆ.

ಈ ವೇಳೆ ಕೋಪಗೊಂಡ ರಿಜ್ವಾನ್, ಮುದಾಸೀರ್ ಪಾಷನ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿ ರಿಜ್ವಾನ್‌ನನ್ನು ಸಾರ್ವಜನಿಕರು ಕೈ ಕಾಲು ಕಟ್ಟಿ ಹಾಕಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.