ಬೆಂಗಳೂರು: ವಾಟ್ಸ್‌ಆ್ಯಪ್ ಮುಖೇನ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಉದ್ಯಮಿಗೆ ನಂಬಿಸಿ 6.56 ಕೋಟಿ ರೂ. ಪಡೆದು ಸೈಬರ್ ಕಳ್ಳರು ವಂಚನೆ ಮಾಡಿದ್ದಾನೆ.
ಶಾಂತಿನಗರದ ನಿವಾಸಿ ಮೋಹಿತ್ ಗೋಯಲ್ ಮೋಸಕ್ಕೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸೆಪ್ಟೆಂಬರ್ 8ರಂದು ಅಪರಿಚಿತ ನಂಬರ್‌ನಿಂದ ಉದ್ಯಮಿ ವಾಟ್ಸ್‌ಆ್ಯಪ್‌ಗೆ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಸಂಬಂಧ ಜಾಹೀರಾತು ಸಲ್ಲಿಸಿದ್ದಾನೆ. ಇದಾದ ಮೇಲೆ ಉದ್ಯಮಿಯನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿಕೊಂಡು ಸ್ಟಾಕ್ ಮಾರ್ಕೆಟ್ ಬಗ್ಗೆ ತರಬೇತಿ ನೀಡಿದ್ದರು. ಇದಾದ ಮೇಲೆ ಲಿಂಕ್ ಕಳುಹಿಸಿ ಇದರ ಸಹಾಯದಿಂದ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಖಾತೆ ತೆರೆದು ಹಣ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದರು.
ಮಾರನೇ ದಿನ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಬ್ಯಾಂಕ್ ಖಾತೆ ವಿವರ ಅಪ್‌ಡೇಟ್ ಮಾಡಿ ಹೂಡಿಕೆ ಶುರು ಮಾಡಿದ್ದರು. ವಿವಿಧ ಬ್ಯಾಂಕ್ ಖಾತೆಗಳಿಂದ ಒಂದೂವರೆ ತಿಂಗಳಲ್ಲಿ 6.56 ಕೋಟಿ ರೂ. ಹೂಡಿಕೆ ಮಾಡಿದ್ದರು. ಅಪ್ಲಿಕೇಷನ್‌ನಲ್ಲಿ ಲಾಭಾಂಶ ನೋಡಿಕೊಂಡು ಹೂಡಿಕೆ ಮಾಡಿದ್ದ ಉದ್ಯಮಿ ಕೊನೆಗೆ ವಿತ್ ಡ್ರಾ ಮಾಡಲು ಮುಂದಾಗಿದ್ದರು.
ಆದರೆ, ಸಾಧ್ಯವಾಗಿಲ್ಲ. ಈ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ಸಮರ್ಪಕ ಉತ್ತರ ಲಭ್ಯವಾಗಿಲ್ಲ.ಆಗ ಇದೊಂದು ಸೈಬರ್ ಅಪರಾಧ ಎಂಬುದು ಗೊತ್ತಾಗಿ ಸಿಇಎನ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡುತ ತನಿಖೆ ಕೈಗೊಳ್ಳಲಾಗಿದೆ.
ಉದ್ಯಮಿ, ಯಾವ ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು, ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ದೂರಿನ ಮಾಹಿತಿ ಕಳುಹಿಸಿ ಖಾತೆ ಪರಿಶೀಲನೆ ನಡೆಸಲಾಗುತ್ತಿದೆ. ಇದೊಂದು ಅಂತಾರಾಷ್ಟ್ರೀಯ ಸೈಬರ್ ವಂಚನೆ ಆಗಿರುತ್ತದೆ. ಸ್ಥಳೀಯರು ಮತ್ತು ವಿದೇಶಿಗರ ಕೈವಾಡ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.