ರಿಪ್ಪನ್‌ಪೇಟೆ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯ ಶಾಲೆಯ ವಾರ್ಷಿಕೋತ್ಸವವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಡಾ.ಶ್ರೀ ಗುರುನಾಗಭೂಷಣ ಶಿವಾಚಾರ್ಯ ಮಹಾ ಸ್ವಾಮೀಜಿ, ದೇವರಾಜ್, ಕಲಗೋಡು ರತ್ನಾಕರ್ ಇತರರಿದ್ದರು.  
ನ್ಯೂಸ್

ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿ

ರಿಪ್ಪನ್‌ಪೇಟೆ: ಪ್ರತಿಯೊಬ್ಬರು ನಿರ್ದಿಷ್ಟ ಗುರಿ, ಸಮರ್ಥ ಗುರುವನ್ನು ಹೊಂದಿರಬೇಕು. ಸಾಧನೆಗೆ ಸ್ಥಿರವಾದ ಶುದ್ಧ ಮನಸ್ಸಿರಬೇಕು ಎಂದು ಮಳಲಿಮಠದ ಶ್ರೀ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಸಾಧಿಸುವ ಗುಣ ಇರಬೇಕು. ಜೀವನದಲ್ಲಿ ಸೋಲು - ಗೆಲುವು ಸಹಜ ಸೋಲಾದಾಗ ಕುಗ್ಗದೆ ಗೆಲವು ಹೊಂದಿದಾಗ ಹಿಗ್ಗದೆ ಸಮಾನವಾಗಿ ಸ್ವೀಕರಿಸಬೇಕು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿಯನ್ನು ಕಲಿಸುವ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕರಿಗಿದೆ ಎಂದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಕ್ಕಳಲ್ಲಿ ಅನೇಕ ಪ್ರತಿಭೆಯಿರುತ್ತದೆ. ಶಿಕ್ಷಕರು ಪ್ರತಿಭೆಗೆ ಪ್ರೋತ್ಸಾಹಿಸಬೇಕು. ವಿದ್ಯೆಯೊಂದಿಗೆ ಕ್ರೀಡಾ ಚಟುವಟಿಕೆಗಳಿಗು ವಿದ್ಯಾರ್ಥಿಗಳು ಒತ್ತು ನೀಡಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ವಿಕಸನ ಸಾಧ್ಯ ಎಂದು ಹೇಳಿದರು.

ಸಂಸ್ಥೆಯ ಸಂಸ್ಥಾಪಕ ದೇವರಾಜ್, ಸವಿತಾ, ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಸದಸ್ಯರಾದ ಎನ್. ಚಂದ್ರೇಶ, ಗಣಪತಿ, ಸುಂದರೇಶ, ಆಸೀಪ್, ನಿರೂಪ, ಸಾರಾಬಿ, ಪಿಎಸ್‌ಐ ಪ್ರವೀಣ, ನಿವೃತ್ತ ಸೈನಿಕ ದ್ವಾರಕೀಶ್, ಮಾಲತೇಶ್, ಮುಖ್ಯ ಶಿಕ್ಷಕ ರವಿ, ಶಿಕ್ಷಕ ಶಿವಮೂರ್ತಿ, ಸಂದೇಶ ಇತರರಿದ್ದರು.