ತಿ.ನರಸೀಪುರ ತಾಲೂಕು ಅಂಕನಹಳ್ಳಿ ಗ್ರಾ.ಪಂ.ಗೆ ಆಯ್ಕೆಗೊಂಡ ಅಧ್ಯಕ್ಷ ಡಿ.ಎಂ.ಸೋಮಶೇಖರ್ ಹಾಗೂ ಉಪಾಧ್ಯಕ್ಷೆ ಜ್ಯೋತಿ ಅವರನ್ನು ಬೆಂಬಲಿಗರು ಅಭಿನಂದಿಸಿದರು. ಸುನೀತಾ ವೀರಪ್ಪಗೌಡ, ನಾಗರತ್ನಮ್ಮ, ಶಿವಮ್ಮ, ಎನ್.ನಿಂಗಯ್ಯ, ಸ್ವಾಮಿಗೌಡ, ಕೆ.ಸಿ.ಮಹದೇವು ಇತರರು ಇದ್ದರು. 
ನ್ಯೂಸ್

ಸೋಮಶೇಖರ್ ಅಧ್ಯಕ್ಷ, ಜ್ಯೋತಿ ಉಪಾಧ್ಯಕ್ಷೆ

ತಿ.ನರಸೀಪುರ: ತಾಲೂಕಿನ ಅಂಕನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಡಿ.ಎಂ.ಸೋಮಶೇಖರ್ ಅವಿರೋಧವಾಗಿ ಆಯ್ಕೆಗೊಂಡರೆ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜ್ಯೋತಿ ಜಯಗಳಿಸಿದರು.

ಗ್ರಾಮದ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ಬುಧವಾರ ಆಯೋಜಿಸಲಾಗಿದ್ದ ಚುನಾವಣೆ ಪ್ರಕ್ರಿಯೆಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಡಿ.ಎಂ.ಸೋಮಶೇಖರ್ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾದರು. ಇನ್ನು ಎಸ್.ಟಿ. ಮಹಿಳಾ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಹಾಗೂ ಹೊಂಬಮ್ಮ ನಾಮಪತ್ರ ಸಲ್ಲಿಸಿದ್ದರು. ಜ್ಯೋತಿ 10 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಹೊಂಬಮ್ಮ ಅವರು 7 ಮತಗಳನ್ನು ಪಡೆದು ಪರಾಭವಗೊಂಡರು.

ಚುನಾವಣಾಧಿಕಾರಿಯಾಗಿ ನೀರಾವರಿ ಇಲಾಖೆಯ ಮಹ್ಮದ್ ಇರ್ಫಾನ್ ಅಲೀಂ, ಸಹಾಯಕ ಚುನಾವಣಾಧಿಕಾರಿಯಾಗಿ ಕೆಂಡಗಣ್ಣಸ್ವಾಮಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕಟವಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ರಾಜ್ಯದಲ್ಲಿ ನಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಎಚ್.ಸಿ.ಮಹದೇವಪ್ಪ ಅವರು ಉಸ್ತುವಾರಿ ಸಚಿವರಾಗಿದ್ದಾರೆ. ಸರ್ಕಾರದ ಅನುದಾನವನ್ನು ಅಧ್ಯಕ್ಷರು ಎಲ್ಲ ಗ್ರಾಮಗಳಿಗೂ ಸಮಾನವಾಗಿ ಹಂಚಿಕೆ ಮಾಡಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಸಲಹೆ ನೀಡಿದರು.

ಸದಸ್ಯರಾದ ನಾಗರತ್ನಮ್ಮ, ಶಿವಮ್ಮ, ಎನ್.ನಿಂಗಯ್ಯ, ಎನ್.ರೇಣುಕಾ, ಟಿ.ಸಿ.ಜಯಲಕ್ಷ್ಮೀ, ಸವಿತಾ, ಕೆ.ಎಸ್.ನಾಗರಾಜು, ಎನ್.ಶಿವಮಾದಯ್ಯ, ಪುಟ್ಟಸ್ವಾಮಿ, ಡಿ.ಆರ್.ಪುಷ್ಪಾ, ಎಂ.ಸಿ.ಸವಿತಾ, ಡಿ.ಎಂ.ಚನ್ನಮ್ಮ, ಶಿವಮ್ಮ, ಶಂಕರ್ ಕುಮಾರ್, ಮಹೇಶ್, ಕಾಂಗ್ರೆಸ್ ಮುಖಂಡ ಸ್ವಾಮಿಗೌಡ, ಕೆ.ಸಿ.ಮಹದೇವು, ಡೋಜರ್ ಮಹದೇವು, ಡಿ.ಎಸ್.ಮಲ್ಲೇಶ್, ಡಿ.ಬಿ.ಶಿವಕುಮಾರ್, ಯಜಮಾನ್ ಚೆಲುವೇಗೌಡ, ಮಂಜುನಾಥ್, ಗುತ್ತಿಗೆದಾರ ಕೆ.ರಾಮಕೃಷ್ಣ, ರಮೇಶ್, ಡಿ.ಸಿ.ಜಯರಾಂ, ಗೋಪಾಲಕೃಷ್ಣ, ಎಂ.ಎಸ್.ಮಹೇಶ್, ಎಲ್‌ಐಸಿ ಎಂ.ಎಂ.ಮಹದೇವು, ಮಂಜು, ಮಹೇಶ್, ಮುದ್ದೇಗೌಡ, ಡೇರಿ ನಾಗರಾಜಣ್ಣ, ರವೀಂದ್ರ, ಅಂಕನಹಳ್ಳಿ ಮಹದೇವು, ನಂಜುಂಡಯ್ಯ, ಎಂ.ಬಿ.ಬಸವರಾಜು, ಗುಡ್ಡದ ಕೊಪ್ಪಲು ದೊರೆಸ್ವಾಮಿ, ಶಿವು, ಕೃಷ್ಣೇಗೌಡ ಹಾಜರಿದ್ದರು.