ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಲೇರಿಯಾ ನಿಯಂತ್ರಣ ತಂಡ ಭೇಟಿ ನೀಡಿ ಪರಿಶೀಲಿಸಿತು. 
ನ್ಯೂಸ್

ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ವಹಿಸಿ

ಸಾಲಿಗ್ರಾಮ: ಕರ್ನಾಟಕವನ್ನು 2025ರ ವೇಳೆಗೆ ಮಲೇರಿಯಾ ಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಮಲೇರಿಯಾ ನಿಯಂತ್ರಣ ತಂಡ ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವ ಕೆಲವು ಸ್ಥಳಗಳನ್ನು ತಂಡ ಪರಿಶೀಲನೆ ನಡೆಸಿತು. ಕೆರೆ, ಬಾವಿ, ತೊಟ್ಟಿಗಳನ್ನು ಪರಿಶೀಲನೆ ಮಾಡಿತಲ್ಲದೆ, ಸೊಳ್ಳೆ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆಯಿತು. ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಸೌಜನ್ಯಾ ನೇತೃತ್ವದ ಸಿಬ್ಬಂದಿ ತಂಡದ ಅಧಿಕಾರಿಗಳನ್ನು ಸ್ವಾಗತಿಸಿ ಸಂಪೂರ್ಣ ಮಾಹಿತಿ ನೀಡಿತು.

ವೈದ್ಯರಾದ ಡಾ.ಸ್ಮಿತಾ ರಾವತ್, ಡಾ.ಉಷಾ, ರವಿಕುಮಾರ್, ಸೀನಿಯರ್ ಆಫೀಸರ್ ದೇವರಾಜ್, ಹಿರಿಯ ಅಧಿಕಾರಿಗಳಾದ ರತ್ನಕುಮಾರಿ, ರಮೇಶ್, ಮಹೇಶ್, ಅಶ್ವಿನಿ, ಪ್ರಕಾಶ್, ಡಿಎಸ್ ಪ್ರಯೋಗಾಲಯದ ತಾಂತ್ರಿಕ ಅಧಿಕಾರಿ ಡಿಸೋಜಾ ಇದ್ದರು.