ನ್ಯೂಸ್

ಸೊರಬ: ಒಂದು ಗಂಟೆಗೂ ಅಧಿಕ ಕಾಲ ಭಾರೀ ಮಳೆ

ಭರ್ಜರಿ ಮಳೆ, ಗುಡುಗು-ಸಿಡಿಲು, ಆರ್ಭಟ, ಜಲಾವೃತ, ಸೊರಬ

ಸೊರಬ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ಭರ್ಜರಿ ಮಳೆ ಸುರಿದಿದೆ. ಗುಡುಗು, ಸಿಡಿಲಿನಿಂದ ಕೂಡಿದ ಮಳೆ ಒಮ್ಮಿಂದೊಮ್ಮೆಲೆ ಆರಂಭವಾಗಿದ್ದು, ಮಧ್ಯಾಹ್ನ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮಳೆಯ ಆರ್ಭಟ ಹೆಚ್ಚಾಗಿತ್ತು. ಚರಂಡಿ, ಮೋರಿಗಳೆಲ್ಲ ತುಂಬಿ ಹರಿದಿದ್ದು, ರಸ್ತೆಯ ಮೇಲೆ ಒಂದು ಅಡಿಗೂ ಹೆಚ್ಚು ನೀರು ನಿಂತಿತ್ತು. ಮೈದಾನಗಳಲ್ಲೆಲ್ಲಾ ನೀರು ತುಂಬಿಕೊಂಡು ಕೆರೆಯಂತಾಗಿವೆ.