ವಿಜಯವಾಣಿ ಸುದ್ದಿಜಾಲ ಕೋಲಾರ
ಸೇವಂತಿಗೆ ಮತ್ತು ಚಂಡು ಹೂವು ಬೆಲೆ ದಿಢೀರನೆ ಕುಸಿತ ಕಂಡ ಕಾರಣ ಹೂವು ಬೆಳೆಗಾರರು ಆತಂಕಕ್ಕೆ ಈಡಾಗಿದ್ದಾರೆ. ಶ್ರಾವಣ ಮಾಸದಿಂದ ಹಬ್ಬಗಳ ಸಾಲು ಪ್ರಾರಂಭಗೊಳ್ಳುತ್ತವೆ. ಈಗಾಗಲೇ ಶ್ರಾವಣ ಪ್ರಾರಂಭಗೊAಡಿದ್ದು, ಹೂವಿನ ಬೆಲೆ ಕುಸಿತ ಕಂಡಿರುವುದರಿAದ ಹೂವು ಬೆಳೆಗಾರರಿಗೆ ಮುಂದೇನೆAಬುವುದು ದಿಕ್ಕು ಕಾಣದಂತಾಗಿದ್ದಾರೆ.
ಮಾರುಕಟ್ಟೆಯಲ್ಲಿ ಸೇವಂತಿಗೆ ಬೆಲೆ ಕೆ.ಜಿ.ಗೆ ೨೦ ರೂ.ಗಳಿಗೆ ಕುಸಿದಿದೆ. ಬಟನ್ ರೋಜು ಸಹ ೨೦ ರೂ.ಗಳಿಗೆ ಕುಸಿದಿದೆ. ಚಂಡು ಹೂವು ೧೦ ರೂ.ಗಳಿಗೆ ಕುಸಿದಿದೆ. ಆದರೆ ಹೂವಿನ ವ್ಯಾಪಾರಿಗಳು ಕೆ.ಜಿ.ಗೆ ೮೦ ರಿಂದ ೧೦೦ ರೂ.ಗಳ ತನಕ ಮಾರಾಟ ಮಾಡುತ್ತಿದ್ದಾರೆ.
ಶ್ರಾವಣ ಮಾಸದಿಂದ ಸಾಲು ಸಾಲು ಹಬ್ಬಗಳು ಪ್ರಾರಂಭಗೊಳ್ಳುತ್ತವೆ. ವರಮಹಾಲಕ್ಷಿö್ಮÃ ಹಬ್ಬ, ಗಣೇಶ ಚತುರ್ಥಿ, ಅಯುಧ ಪೂಜೆ, ದೀಪಾವಳಿ, ಸಂಕ್ರಾAತಿ ಹೀಗೆ ಯುಗಾದಿಯ ತನಕ ಸಾಲು ಸಾಲು ಹಬ್ಬಗಳು ಬರುತ್ತವೆ ಎಂದು ಹಬ್ಬಗಳನ್ನು ನಂಬಿ ರೈತರು ಸೇವಂತಿಗೆ, ಚಂಡು, ಬಟನ್ ರೋಜ್ ಹೀಗೆ ನಾನಾ ರೀತಿಯ ಹೂವುಗಳನ್ನು ಬೆಳೆಯುತ್ತಾರೆ.
ಅದೇ ರೀತಿ ಈ ವರ್ಷವೂ ಒಳ್ಳೆಯ ಬೆಲೆ ಸಿಗುತ್ತದೆಂದು ವಿವಿಧ ಜಾತಿಯ ಹೂವುಗಳನ್ನು ಬೆಳೆದಿರುವ ರೈತರು ದಿಢೀರೆಂದು ವರಲಕ್ಷಿö್ಮÃ ಹಬ್ಬದ ನಂತರ ಹೂವಿನ ಕುಸಿತ ಕಂಡಿರುವುದರಿAದ ರೈತರು ಕಂಗಾಲಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಹೂವು ಬೆಳೆಗಾರರ ಸಂಖ್ಯೆಯು ಹೆಚ್ಚಾಗಿದೆ.
ಇದಕ್ಕೆ ಕಾರಣವೂ ಉಂಟು ಟಮೆಟೋ ಬೆಳೆ ಕೈಕೊಟ್ಟಿದ್ದರಿಂದ ಅರ್ಧ ಬೆಳೆಗೆ ವೈರಸ್ ತಗುಲಿದ ಕಾರಣ ಟಮೆಟೋ ಬೆಳೆಯಲು ತಿಪ್ಪೆ ಗೊಬ್ಬರ ಸೇರಿದಂತೆ ಭೂಮಿಗೆ ಫಲವತತ್ತೆ ನೀಡಿ ಟಮೆಟೋ ಸಸಿಗಳನ್ನು ನಾಟಿ ಮಾಡಲಾಗಿತ್ತು. ಬೆಳೆ ಅರ್ಧಕ್ಕೆ ಕೈಕೊಟ್ಟ ಕಾರಣ ಟಮೆಟೋ ಮತ್ತು ಸೇವಂತಿಗೆ, ಚಂಡು ಹೂವು ಮುಂತಾದ ಹೂವು ಸಸಿಗಳನ್ನು ನಾಟಿ ಮಾಡಿದರು.
ಪ್ರತಿ ವರ್ಷ ಹೂವು ಬೆಳೆಯುವ ಬೆಳೆಗಾರರ ಜೊತೆಗೆ ಟಮೆಟೋ ಕೈಕೊಟ್ಟಿದ್ದ ಭೂಮಿಯಲ್ಲಿ ಹೂವು ಬೆಳೆಯಲು ರೈತರು ಮುಂದಾದ ಕಾರಣ, ಬೆಳಗಾರರ ಸಂಖ್ಯೆ ಹೆಚ್ಚಾಗಿ ಮಾರುಕಟ್ಟೆಗೆ ಪ್ರತಿ ವರ್ಷಕ್ಕಿಂತ ಈ ವರ್ಷ ಅಧಿಕ ಹೂವು ಬರುತ್ತಿರುವುದರಿಂದ ಬೆಲೆ ಕುಸಿಯಲು ಒಂದು ಕಾರಣವಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಒಂದು ಎಕರೆಗೆ ಸೇವಂತಿಗೆ ಬೆಳೆಯಲು ೬೦೦೦ ದಿಂದ ೭೦೦೦ ಸಾವಿರ ಸಸಿಗಳನ್ನು ನಾಟಿ ಮಾಡಬೇಕಾಗುತ್ತದೆ. ಒಂದು ಸಸಿ ೩.೫೦ ಪೈಸೆಯಂತೆ ಖರೀದಿಸಿ ನಾಟಿ ಮಾಡುತ್ತಾರೆ. ಒಂದು ಎಕರೆಗೆ ರೈತರಿಗೆ ಬೀಳುವ ಖರ್ಚು ೧.೫ ಲಕ್ಷದಿಂದ ೨ ಲಕ್ಷದ ತನಕ ಔಷಧಿ ಗೊಬ್ಬರ ಕೂಲಿಯ ಖರ್ಚು ಬರುತ್ತದೆ. ಒಂದು ಕೆ.ಜಿ.ಗೆ ೧೦೦ ರಿಂದ ೧೨೦ ತನಕ ಮಾರಾಟವಾದರೆ ರೈತರಿಗೆ ಅಸಲು ಬರುತ್ತದೆ ಎಂಬುವುದನ್ನು ರೈತರು ಹೇಳುತ್ತಾರೆ. ಈಗಿನ ಮಾರುಕಟ್ಟೆ ದರದಲ್ಲಿ ಕೆ.ಜಿ.ಗೆ ೨೦ ರೂ. ಸಿಗುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.