ನಗರದ ಸೇಂಟ್ ಫಿಲೋಮಿನಾಸ್ ಕಾಲೇಜಿನಲ್ಲಿ(ಸ್ವಾಯತ್ತ) ಸೋಮವಾರ ದೀಕ್ಷಾರಂಭ ಪರಿಚಯ ಕಾರ್ಯಕ್ರಮ ನಡೆಯಿತು.
ಪ್ರಾಂಶುಪಾಲ ಡಾ.ರವಿ ಜೆ.ಡಿ.ಸಲ್ಡಾನ್ಹಾ ಮಾತನಾಡಿ, ಶಿಕ್ಷಣ ಎಲ್ಲರ ಭವಿಷ್ಯದ ಯಶಸ್ಸಿಗೆ ಬುನಾದಿ ಆಗಲಿದೆ. ಕಾಲೇಜಿನ ವೈವಿಧ್ಯಮಯ ಶೈಕ್ಷಣಿಕ ಪಠ್ಯಕ್ರಮಗಳು, ಆಧುನಿಕ ಸೌಕರ್ಯಗಳು ಮತ್ತು ಅನುಭವಿ ಅಧ್ಯಾಪಕರನ್ನೊಳಗೊಂಡ ಮಾಹಿತಿ ನೀಡಿದರು. ಪ್ರಯೋಜನಕಾರಿಯ ಶೈಕ್ಷಣಿಕ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರು.
ರೆವ್.ಡಾ.ಲೌರ್ದು ಪ್ರಸಾದ್ ಜೋಸೆಫ್ ಮಾತನಾಡಿ, ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸೇಂಟ್ ಫಿಲೋಮಿನಾಸ್ ಕಾಲೇಜನ್ನು ಆರಿಸಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. 80 ವರ್ಷಗಳ ಕಾಲಸೀಮೆಯ ಸಮೃದ್ಧ ಪರಂಪರೆಯನ್ನು ಪರಿಚಯಿಸಿ, 2025ನೇ ಶೈಕ್ಷಣಿಕ ವರ್ಷಕ್ಕೆ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಹೆಮ್ಮೆಗೀಡಾಗಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ಶಿಸ್ತು, ನೈತಿಕ ಮೌಲ್ಯಗಳು ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳುವಲ್ಲಿ ಕಾಲೇಜಿನ ಮಹತ್ವದ ಬಗ್ಗೆ ತಿಳಿಸಿದರು. ಆಡಳಿತಾಧಿಕಾರಿ ರೆವ್. ಫಾ. ಜ್ನಾನಪ್ರಕಾಶಂ, ರೆವ್. ಫಾ.ಎಸ್.ಡೇವಿಡ್ ಸಗಯರಾಜ್, ಉಪ ಪ್ರಾಂಶುಪಾಲ ಎಂ.ನಾಗರಾಜ್ ಅರಸ್, ರೋನಾಲ್ಡ್ ಪ್ರಕಾಶ್ ಕ್ಯೂಟಿನ, ಡಾ.ರೀನಾ ಫ್ರಾನ್ಸಿಸ್, ಡಾ. ನೂರ್ ಮುಬಶೀರ್ ಎ.ಲಿಡಿಯಾ ಅಂಜಲಿ, ಎ.ಥಾಮಸ್ ಗುಣಸೀಲೆನ್, ಡಾ.ವಿ.ದೀಪಾ ಇತರರಿದ್ದರು.