ಹೊಸನಗರದಲ್ಲಿ ಹಿಂದುಗಳ ಹತ್ಯೆ ಖಂಡಿಸಿ ವಿವಿಧ ಹಿಂದುಪರ ಸಂಘಟನೆಗಳಿಂದ ಪ್ರತಿಭಟನೆ ಕಂದಾಯ ಇಲಾಖೆಯ ಗ್ರೇಡ್2 ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋರಿಗೆ ಮನವಿ ಸಲ್ಲಿಸಲಾಯಿತು.ಹಿಂದು ಸಂಘಟನೆಯ ಸುಧೀಂದ್ರ ಪಂಡಿತ್, ಕೆ.ವಿ.ಸುಬ್ರಹ್ಮಣ್ಯ ಮತ್ತಿಮನೆ, ಹಲಸಿನಮನೆ ರಮೇಶ್, ಸುರೇಶ್ ಸ್ವಾಮಿರಾವ್ ಇತರರಿದ್ದರು. 
ನ್ಯೂಸ್

ಸುರಕ್ಷತೆಯಿಂದ ಬದುಕಲು ಅವಕಾಶ ಕಲ್ಪಿಸಿ

ಹೊಸನಗರ:ಕಾಶ್ಮೀರದ ಘಟನೆ ಖಂಡನೀಯ. ಉಗ್ರರಿಗೆ ತಕ್ಕ ಶಾಸ್ತಿ ಮಾಡಬೇಕಿದೆ ಎಂದು ಬಿಜೆಪಿ ಜಿಲ್ಲಾ ಒಬಿಸಿ ಅಧ್ಯಕ್ಷ ಎಂ.ಎನ್.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ವಿವಿಧ ಹಿಂದುಪರ ಸಂಘಟನೆ, ಎಬಿವಿಪಿ ಸಂಘಟನೆ ಹಾಗೂ ತಾಲೂಕು ಬಿಜೆಪಿಯಿಂದ ಬಸ್ ನಿಲ್ದಾಣದ ಆವರಣದಿಂದ ತಾಲೂಕು ಕಚೆೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕಂದಾಯ ಇಲಾಖೆಯ ಗ್ರೇಡ್2 ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಬಿಜೆಪಿ ಹಿರಿಯ ಮುಖಂಡ ಎನ್.ಆರ್.ದೇವಾನಂದ್ ಮಾತನಾಡಿ, ಹಿಂದು ರಾಷ್ಟ್ರದಲ್ಲಿ ಹಿಂದುಗಳೇ ಶಾಂತಿಯುತವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನ ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ದಿಟ್ಟತನದಿಂದ ಪಾಕಿಸ್ತಾನವನ್ನು ನಿರ್ನಾಮ ಮಾಡಬೇಕು. ದೇಶದ ಸೈನಿಕರಿಗೆ ಬೆಂಬಲವಾಗಿ ನಿಂತು ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಗಳ ಮೇಲೆ ದಾಳಿ ಮಾಡಲು ಆದೇಶಿಸಬೇಕು. ಭಾರತದ ಪ್ರಜೆಗಳು ಸುರಕ್ಷತೆಯಿಂದ ಬದುಕಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಹಿಂದು ಸಂಘಟನೆಯ ಸುಧೀಂದ್ರ ಪಂಡಿತ್, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ.ಸುಬ್ರಹ್ಮಣ್ಯ ಮತ್ತಿಮನೆ, ಹಲಸಿನಮನೆ ರಮೇಶ್, ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎನ್.ಶ್ರೀಧರ ಉಡುಪ, ಸತ್ಯನಾರಾಯಣ, ಮಂಜುನಾಥ್, ಸಂಜೀವ, ಗಣಪತಿ ಬೆಳಗೋಡು, ಮುರುಳೀಧರ, ಶ್ರೀನಿವಾಸ್, ಗೌತಮ್ ಕುಮಾರಸ್ವಾಮಿ, ರಮೇಶ್ ಶೆಟ್ಟಿ, ಬಸವರಾಜ್, ಮಂಡಾನಿ ಮೋಹನ್, ವಿನಯ್ ಕುಮಾರ್, ಮಹೇಂದ್ರ, ಶಿವಕುಮಾರ್, ಶ್ರೀಪತಿರಾವ್, ಚಿಕ್ಕಮಣತಿ ಅಭಿಲಾಷ್, ಮನುಕುಮಾರ್, ಹರೀಶ್, ಹಿಂದೂ ಪರ ಕಾರ್ಯಕರ್ತರು ಪಾಲ್ಗೊಂಡಿದ್ದರು.