ನ್ಯೂಸ್

ಸುಮ್ಮನಿದ್ದರೆ ಸರಿ, ಜಮೀರ್ ಗೆ ಒಕ್ಕಲಿಗರ ಎಚ್ಚರಿಕೆ

ವಿಜಯವಾಣಿ ಸುದ್ದಿಜಾಲ

ರಾಮನಗರ: ಶಾಸಕ ಜಮೀರ್ ಅಹಮದ್ ಒಕ್ಕಲಿಗರ ಸಮುದಾಯ ಹಾಗೂ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿರುವ ಕುರಿತು ಕ್ಷಮಾಪಣೆ ಕೇಳಬೇಕು. ತಮ್ಮ ವರ್ತನೆ ಬದಲಾವಣೆ ಮಾಡಿಕೊಳ್ಳದಿದ್ದರೇ ಇವರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಾಮನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮೇಲಿಂಗು ಎಚ್ಚರಿಕೆ ನೀಡಿದರು.

ನಗರದ ಸಂಘದ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀರ್ ಅಹಮದ್ ಜನಾಂಗದ ವಿರುದ್ಧ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳೀದರು.

ಶಾಸಕ ಜಮೀರ್ ಅಹಮದ್ ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲವಾದರೇ ಸಮುದಾಯದವರು ಸೇರಿ ಹೋರಾಟ ಮಾಡುತ್ತೇವೆ. ಒಕ್ಕಲಿಗರು ರೈತಾಪಿ ಜನರು, ಬೆಳೆದ ಆಹಾರವನ್ನು ಎಲ್ಲರೂ ಹಂಚಿಕೊAಡು ತಿನ್ನುತ್ತಿದ್ದೇವೆ. ಜತೆಗೆ, ಮುಸ್ಲಿಂ ಹಾಗೂ ಒಕ್ಕಲಿಗರು ಬಾಂಧವ್ಯದಿಂದ ಜೀವನ ಸಾಗಿಸುತ್ತಿದ್ದೇವೆ. ನಾವು ಬೆಳೆದ ಆಹಾರ ಪದಾರ್ಥಗಳನ್ನು ಮುಸ್ಲಿಂ ಸಮುದಾಯದವರು ಖರೀಧಿಸಿ ಮಾರಾಟ ಮಾಡುತ್ತಿದ್ದಾರೆ ಸಾಮರಸ್ಯದಿಂದ ಜೀವನ ಮಾಡುತ್ತಿದ್ದು ಇದಕ್ಕೆ ಧಕ್ಕೆ ತರಬಾರದು ಎಂದುರು.

ಜಮೀರ್ ಅಹಮದ್ ಅವರು, ದೇಶದ ಪ್ರಧಾನ ಮಂತ್ರಿ ಅಥವಾ ರಾಜ್ಯದ ಮುಖ್ಯಮಂತ್ರಿಯಾಗಲಿ ಇದಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಹೇಳಿಕೆಗಳನ್ನು ನೀಡಬೇಕಾದರೇ ಯೋಚಿಸಬೇಕು. ಕ್ಷೇಮಾಪಣೆ ಕೇಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೆಂಪೇಗೌಡ ಜಯಂತಿ ಆಚರಣ ಸಮಿತಿ ಅಧ್ಯಕ್ಷ ಚಂದ್ರಯ್ಯ ಮಾತನಾಡಿ, ಶಾಸಕ ಜಮೀರ್ ಅಹಮದ್ ಅರು ದೇವೇಗೌಡ ಹಾಗೂ ಚುಂಚನಗಿರಿ ಶ್ರೀಗಳಿಗೆ ಬೆಳೆದು, ಅವರ ಬೆನ್ನಿಗೆ ಚೂರು ಹಾಕಿದ ಮಹಾನಾಯಕರಾಗಿದ್ದಾರೆ. ಒಕ್ಕಲಿಗರ ಸಮುದಾಯ ಹಾಗೂ ನಾಯಕರ ವಿರುದ್ಧ ಕೇವಲವಾಗಿ ಮಾತನಾಡಬಾರದು. ಜನಾಂಗದ ವಿಷಯಕ್ಕೆ ಬರಬಾರದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಕಾಂತರಾಜ್ ಪಟೇಲ್, ರವಿ, ಶಿವರಾಜು, ತಮ್ಮಣ್ಣ, ಬೈರೇಗೌಡ, ನಂದೀಶ್, ಶಿವ, ರಾಜಣ್ಣ, ಕಿರಣ್ ಕಾಂತರಾಜು, ಶ್ರೀನಿವಾಸಮೂರ್ತಿ ರಾಜು ಮುಂತಾದವರಿದ್ದರು.