ನ್ಯೂಸ್

ಸುಬ್ರಹ್ಮಣ್ಯ ಷಷ್ಠಿ ಆಚರಣೆ

ಹನಗೋಡು: ಹೋಬಳಿ ವ್ಯಾಪ್ತಿಯ ವಿವಿಧೆಡೆ ಮಂಗಳ ವಾರ ಸುಬ್ರಹ್ಮಣ್ಯ ಷಷ್ಠಿ ಹಬ್ಬದ ಪ್ರಯುಕ್ತ ಭಕ್ತರು ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಿದರು. ಮಹಿಳೆಯರು ಬೆಳಿಗ್ಗೆಯಿಂದಲೇ ಉಪವಾಸ ಇದ್ದು, ಕುಟುಂಬದ ಸದಸ್ಯ ರೊಂದಿಗೆ ಹುತ್ತ ಇರುವ ಕಡೆ ತೆರಳಿ ಪೂಜೆ ಸಲ್ಲಿಸಿದರು. ಹುತ್ತಕ್ಕೆ ಬಾಳೆಹಣ್ಣು, ಸಕ್ಕರೆ, ಹಾಲಿನ ನೈವೇದ್ಯವನ್ನಿಟ್ಟು ಹಾಲೆರೆದು ಪೂಜೆ ಮಾಡಿದರು. ಹನಗೋಡು, ಕಿರಂಗೂರು ಗೇಟ್, ದೊಡ್ಡಹೆಜ್ಜೂರು, ನೇರಳಕುಪ್ಪೆ ಸೇರಿದಂತೆ ವಿವಿಧೆಡೆ ನಾಗನ ಸಾನ್ನಿಧ್ಯ ಇರುವ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಭಕ್ತರು, ನಾಗರ ಕಲ್ಲುಗಳಿಗೆ ಹಾಲೆರೆದು, ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದರು.

ಹೋಬಳಿ ವ್ಯಾಪ್ತಿಯ ವಿವಿಧೆಡೆ ಮಂಗಳ ವಾರ ಸುಬ್ರಹ್ಮಣ್ಯ ಷಷ್ಠಿ ಹಬ್ಬದ ಪ್ರಯುಕ್ತ ಭಕ್ತರು ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಿದರು. ಮಹಿಳೆಯರು ಬೆಳಿಗ್ಗೆಯಿಂದಲೇ ಉಪವಾಸ ಇದ್ದು, ಕುಟುಂಬದ ಸದಸ್ಯ ರೊಂದಿಗೆ ಹುತ್ತ ಇರುವ ಕಡೆ ತೆರಳಿ ಪೂಜೆ ಸಲ್ಲಿಸಿದರು. ಹುತ್ತಕ್ಕೆ ಬಾಳೆಹಣ್ಣು, ಸಕ್ಕರೆ, ಹಾಲಿನ ನೈವೇದ್ಯವನ್ನಿಟ್ಟು ಹಾಲೆರೆದು ಪೂಜೆ ಮಾಡಿದರು. ಹನಗೋಡು, ಕಿರಂಗೂರು ಗೇಟ್, ದೊಡ್ಡಹೆಜ್ಜೂರು, ನೇರಳಕುಪ್ಪೆ ಸೇರಿದಂತೆ ವಿವಿಧೆಡೆ ನಾಗನ ಸಾನ್ನಿಧ್ಯ ಇರುವ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಭಕ್ತರು, ನಾಗರ ಕಲ್ಲುಗಳಿಗೆ ಹಾಲೆರೆದು, ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದರು.