ನ್ಯೂಸ್

‘ಸುಪ್ರೀಂಕೋರ್ಟ್‌ನ ಒಳಮೀಸಲಾತಿ ತೀರ್ಪು ಮತ್ತು ಜಾರಿ’ ಕುರಿತು ವಿಚಾರಸಂಕಿರಣ

‘ಸುಪ್ರೀಂಕೋರ್ಟ್‌ನ ಒಳಮೀಸಲಾತಿ ತೀರ್ಪು ಮತ್ತು ಜಾರಿ’ ಕುರಿತು ವಿಚಾರಸಂಕಿರಣ

ಜನಚೈತನ್ಯ ಫೌಂಡೇಷನ್ ಹಾಗೂ ಜಿಲ್ಲಾ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ‘ಸುಪ್ರೀಂಕೋರ್ಟ್‌ನ ಒಳಮೀಸಲಾತಿ ತೀರ್ಪು ಮತ್ತು ಜಾರಿ’ ಕುರಿತು ವಿಚಾರಸಂಕಿರಣವನ್ನು ನಗರದ ಇಂಜಿನಿಯರ್ಸ್‌ ಸಂಸ್ಥೆಯ ಸಭಾಂಗಣದಲ್ಲಿ ನ.1ರಂದು ಸಂಜೆ 4.30ಕ್ಕೆ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಆರ್.ಲಕ್ಷ್ಮಣ್ ತಿಳಿಸಿದರು.

ವಿಚಾರಸಂಕಿರಣವನ್ನು ಚಿಂತಕ ಪ್ರೊ.ಎಚ್.ಗೋವಿಂದಯ್ಯ ಉದ್ಘಾಟಿಸುವರು. ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮಾಜಿ ಮೇಯರ್ ನಾರಾಯಣ, ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲ ವೇದಿಕೆ ಅಧ್ಯಕ್ಷ ಎಸ್.ಅರುಣ್‌ಕುಮಾರ್, ಮೈಸೂರು ವಿವಿ ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಆರ್.ತಿಮ್ಮರಾಯಪ್ಪ, ಮಾತಂಗ ಮಹಾಪರಿಷತ್ ಅಧ್ಯಕ್ಷ ಅರಕಲವಾಡಿ ನಾಗೇಂದ್ರ, ಆದಿಜಾಂಬವ ಮಹಾಸಭಾ ಅಧ್ಯಕ್ಷ ರೈಲ್ವೆ ಗಂಗಯ್ಯ, ವಕೀಲರಾದ ದಾಸಯ್ಯ, ಮಾಳಪ್ಪ ಕುರ್ಕಿ ಭಾಗವಹಿಸುತ್ತಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಒಳಮೀಸಲಾತಿ ಕುರಿತು ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರದ ಕುರಿತು ಚರ್ಚಿಸಲಾಗುವುದು. ಈಗಾಗಲೇ ಸದಾಶಿವ ಆಯೋಗದ ವರದಿಯಿದ್ದರೂ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವರದಿಗಾಗಿ ಆಯೋಗ ರಚಿಸಿರುವುದು ಗೊಂದಲವೆನಿಸಿದರೂ ವಿಳಂಬವಿಲ್ಲದೆ ಮುಗಿಯಲಿ ಎಂದು ಆಶಿಸುತ್ತೇವೆ. ವರದಿ ಬರುವವರೆಗೂ ಹೊಸ ನೇಮಕಾತಿ ತಡೆಹಿಡಿರುವುದು ಸ್ವಾಗತಾರ್ಹ ಎಂದರು.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ನ್ಯಾಯಪರ ವೇದಿಕೆಯ ಮರಡಿಪುರ ರವಿಕುಮಾರ್, ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್, ಜಿಲ್ಲಾ ಕೊಳಚೆ ನಿವಾಸಿಗಳ ಒಕ್ಕೂಟದ ಗೌರವಾಧ್ಯಕ್ಷ ಯತಿರಾಜ್, ಜೈ ಭುವನೇಶ್ವರಿ ಟ್ರಸ್ಟ್ ಅಧ್ಯಕ್ಷ ತಿಪ್ಪಯ್ಯ ಇದ್ದರು.