ನ್ಯೂಸ್

ಸಿನಿಮಾ ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಸಿನಿಮಾ ಸಂಸ್ಕೃತಿ ಬೆಳೆಸೋಣ / ಕುಲಪತಿ ಪ್ರೋ.ನಿರಂಜನ ವಾನಳ್ಳಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಸಿನಿಮಾಗಳು ಜನರ ಸಂಸ್ಕೃತಿಯನ್ನು ಕಟ್ಟುವಂತಿರಬೇಕು. ಕಲಾತ್ಮಕ ಸಿನಿಮಾಗಳು ಮನುಷ್ಯನ ಮನಸ್ಸನ್ನು ಪ್ರಭಾವಿಸುತ್ತವೆ. ಅವರಲ್ಲಿ ಸಂಸ್ಕೃತಿಯನ್ನು ಕಟ್ಟುತ್ತವೆ ಎಂದು ಕುಲಪತಿ ಪ್ರೋ.ನಿರಂಜನ ವಾನಳ್ಳಿ ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಆಶ್ರಯದಲ್ಲಿ ತಾಲ್ಲೂಕಿನ ಮಂಗಸAದ್ರ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ 'ಕನ್ನಡದಲ್ಲಿ ಹೊಸ ಅಲೆ ಸಿನಿಮಾ-೫೦' ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿನಿಮಾ ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಸಾಹಿತ್ಯವಿಲ್ಲದೆ ಸಿನಿಮಾ ಇಲ್ಲ. ಸಿನಿಮಾವಿಲ್ಲದೆ ಸಾಹಿತ್ಯವೂ ಇಲ್ಲ. ಸಿನಿಮಾ ಸಂಸ್ಕೃತಿ ಬೆಳೆಸೋಣ ಪ್ರತಿ ೧೫ ದಿನಗಳಿಗೊಮ್ಮೆ ಕನ್ನಡ ಚಲನಚಿತ್ರಗಳ ಪ್ರದರ್ಶನವನ್ನು ಮಾಡುವ ವ್ಯವಸ್ಥೆ ಆಗಲಿದೆ. ಸ್ಥಳೀಯ ಗ್ರಾಮದ ಜನರಿಗೂ ಸಿನಿಮಾ ತಲುಪಿಸುವ ವ್ಯವಸ್ಥೆಯನ್ನು ಮಾಡೋಣ' ಎಂದರಲ್ಲದೆ ಇಂತಹ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಕನ್ನಡ ವಿಭಾಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ಸಿನಿಮಾ ವಿಮರ್ಶಕ ಕೆ.ಪುಟ್ಟಸ್ವಾಮಿ ಮಾತನಾಡಿ, ಸಂಗೀತ, ಚಿತ್ರಕಲೆ, ಸಿನಿಮಾ ಮುಂತಾದ ವಿಷಯಗಳನ್ನು ಶೈಕ್ಷಣಿಕ ವಲಯದಿಂದ ಪ್ರಜ್ಞಾಪೂರ್ವಕವಾಗಿಯೇ ದೂರ ಇರಿಸಲಾಗಿದೆ. ಕೆಲವೆಡೆ ಶೈಕ್ಷಣಿಕ ವಲಯದಲ್ಲಿ ಸಿನಿಮಾ ಅಧ್ಯಯನ ವಿಷಯವಾಗಿ ಪರಿಚಿತವಾದರೂ ಅವಕಾಶಗಳು ಕಡಿಮೆ ಇರುವುದರಿಂದಾಗಿ ಅದು ಪ್ರಚಲಿತಕ್ಕೆ ಬರಲಿಲ್ಲ ಎಂದರು.

ವಿಶ್ವವಿದ್ಯಾಲಯಗಳು ಸಿನಿಮಾ ಕುರಿತು ನಡೆಸುವ ಈ ರೀತಿಯ ಭೌತಿಕ ಮತ್ತು ಭೌದ್ಧಿಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುತ್ತವೆ. ಈ ನಿಟ್ಟಿನಲ್ಲಿ ಉತ್ತರ ವಿಶ್ವವಿದ್ಯಾಲಯ ಉತ್ತಮ ಕೆಲಸ ಮಾಡಿದೆ. ಸಿನಿಮಾ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ತಲುಪುವಂತಾಗಬೇಕು ಎಂದರು.

'ಹಾಲಿವುಡ್ ಸಿನಿಮಾ ರಂಗವು ಜಗತ್ತಿನ ಎಲ್ಲಾ ಸಿನಿ ರಂಗಗಳ ಮೇಲೆ ಪ್ರಭಾವ ಬೀರಿದ್ದು. ಭಾರತೀಯ ಚಲನಚಿತ್ರದಲ್ಲೂ ಅದರ ಪ್ರಭಾವ ಇದೆ' ಎಂದು ಪ್ರತಿಪಾದಿಸಿದರು.

ಕುಲಸಚಿವ ಪ್ರೊ.ಡಿ.ಡೊಮಿನಿಕ್ ಮಾತನಾಡಿ, ವಸಾಹತುಶಾಹಿಯಿಂದ ನುಡಿ ಪಲ್ಲಟವಾಯಿತು. ಇದು ಸಿನಿಮಾ ಜಗತ್ತನ್ನು ಪ್ರಭಾವಿಸಿತು. ಸಿನಿಮಾ ಮೂಲಕ ಅರಿವು ಸಾಧ್ಯ. ಅರಿವು ರೂಪಗೊಳ್ಳುವುದಕ್ಕೆ ಸಿನಿಮಾ ಧ್ವನಿ ಮುಖ್ಯವಾಗುತ್ತದೆ ಎಂದರು.

ಗುAಡಪ್ಪ ದೇವಿಕೇರಿ, ನಾ.ಮುನಿರಾಜು, ಗಾಯತ್ರಿದೇವಿ, ನಿರ್ದೇಶಕಿ ಡಿ.ಕುಮುದಾ, ಕನ್ನಡ ವಿಭಾಗದ ಕೆ.ವಿ.ನೇತ್ರಾವತಿ, ಶ್ರೀನಿವಾಸ್ ಇದ್ದರು.

ಚಿತ್ರ ೧೩ ಕೆ.ಎಲ್.ಆರ್. ೦೨ : ಕೋಲಾರ ತಾಲ್ಲೂಕಿನ ಮಂಗಸAದ್ರ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಆಯೋಜಿಸಿದ್ದ ಸಿನಿಮೋತ್ಸವದಲ್ಲಿ ಸಿನಿಮಾ ವಿಮರ್ಶಕ ಕೆ.ಪುಟ್ಟಸ್ವಾಮಿ ಮಾತನಾಡುತ್ತಿರುವುದು. ಕುಲಪತಿ ಪ್ರೊ.ನಿರಂಜನ ವಾನಳ್ಳಿ, ಕುಲಸಚಿವ ಪ್ರೊ.ಡಿ.ಡೊಮಿನಿಕ್ ಇದ್ದರು.