ವಿಜಯವಾಣಿ ಸುದ್ದಿಜಾಲ ಕೋಲಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಕುರ್ಚಿ ಅಲುಗಾಡಿದಾಗ ಜಾತಿ ಗಣತಿ ವಿಚಾರ ಮುಂದೆ ಬರುತ್ತೆ. ಕೇಂದ್ರ ಸರ್ಕಾರ ಈ ಬಾರಿ ೨೦೨೭ ಕ್ಕೆ ಜಾತಿ ಗಣತಿ ವರದಿ ನೀಡಲಿದೆ ಎಂದು ಸಂಸದ ಪಿ.ಸಿ.ಮೋಹನ್ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಕೋಲಾರದ ಬಿಜೆಪಿ ಕಛೇರಿಯಲ್ಲಿ ಮಂಗಳವಾರ ಸಾಮಾಜಿಕ ನ್ಯಾಯ ಜಾಗೃತಿ ಸಮಿತಿ ವೇದಿಕೆಯಿಂದ ಜನಗಣತಿ ಹಿನ್ನಲೆ ಮತ್ತು ಮುನ್ನಲೆ ಬಗ್ಗೆ ನಡೆದ ಪೂರ್ವಭಾವಿ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ೨ ವರ್ಷಗಳಿಂದ ಎರಡು ಮತ್ತು ಮೂರು ಬಾರಿ ಕ್ಯಾಬಿನೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ಬಗ್ಗೆ ವಿಷಯ ತೆಗೆದುಕೊಂಡು ಆದರೆ ಮಂಡನೆ ಮಾಡಿಲ್ಲ.
ಈಗ ದೆಹಲಿ ನಾಯಕರು ಬೇಡ ಎನ್ನುತ್ತಿದ್ದಾರೆ ಎಂದು ಯೂಟರ್ನ್ ಹೊಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳನ್ನು ಲೇವಡಿ ಮಾಡಿದರು. ಮತ್ತೆ ಹೊಸ ಸಮೀಕ್ಷೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಜನಗಣತಿಗಾಗಿ ಕಾಂಗ್ರೆಸ್ ಸರ್ಕಾರ ೩೦೦ ಕೋಟಿ ಖರ್ಚು ಮಾಡಿ ಜನರ ನಂಬಿಕೆ ಕಳೆದುಕೊಂಡಿದೆ ಎಂದರು.
ಹಿಂದುಳಿದ ವರ್ಗಗಳ ಪರವಾಗಿ ನಾವಿದ್ದೇವೆ ಎನ್ನುತ್ತಾರೆ. ನೆಹರು ಕಾಲದಿಂದಲೂ ಸಹ ಕಾಂಗ್ರೆಸ್ ಪಕ್ಷ ಇದೇ ರೀತಿ ಮಾಡುತ್ತಿದೆ. ಸಮೀಕ್ಷೆಗಳನ್ನೆಲ್ಲಾ ಕಸದ ಬುಟ್ಟಿಗೆ ಹಾಕಿದ್ದಾರೆ. ಮತ್ತೆ ಸಿದ್ದರಾಮಯ್ಯ ಅವರು ತಮ್ಮ ಖುರ್ಚಿಗಾಗಿ ಸಮೀಕ್ಷೆಗೆ ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ೨೦೨೭ಕ್ಕೆ ಸಮೀಕ್ಷೆ ಮಾಡಲಿದೆ. ಅದರ ಭಾಗವಾಗಿ ಇಂದು ಸಮೀಕ್ಷೆ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ ಎಂದರು.
ಜನ ಮತ್ತು ಜಾತಿ ಗಣತಿ ಕುರಿತು ಬಿಜೆಪಿ ವತಿಯಿಂದ ಓಬಿಸಿ ಮುಖಂಡರಿAದ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಈ ಹಿಂದೆ ಬೆಂಗಳೂರಿನಲ್ಲಿ ಸಭೆ ಮಾಡಿ ಅಭಿಪ್ರಾಯ ಸಂಗ್ರಹಣೆಯನ್ನು ಮುಖಂಡರು ಮಾಡಿದ್ದಾರೆ. ೬೪ ವರ್ಷಗಳ ನಂತರ ಜಾತಿ ಮತ್ತು ಜನ ಗಣತಿಗೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ೧೦ ವರ್ಷಕ್ಕೆ ಒಮ್ಮೆ ಈ ಗಣತಿ ನಡೆಯಬೇಕಿತ್ತು. ಅದರೆ ಕಾಂಗ್ರೆಸ್ ನವರು ೬೦ ವರ್ಷಗಳಿಂದ ಸಮೀಕ್ಷೆ ಮಾಡಿಲ್ಲ. ಹಾಗಾಗಿ ಮೋದಿ ಸರ್ಕಾರ ಮಾಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸುವುದಾಗಿ ತಿಳಿಸಿದರು.
ರಾಜ್ಯದಿಂದ ಸಿದ್ಧರಾಮಯ್ಯ ಕೇಂದ್ರಕ್ಕೆ :
ಸಿದ್ಧರಾಮಯ್ಯನವರನ್ನು ರಾಜ್ಯದಿಂದ ಸಾಗಾಕಲು ರಾಷ್ಟಿçÃಯ ಒಬಿಸಿ ಸಲಹಾ ಮಂಡಳಿಯ ನೇತೃತ್ವದ ಹುದ್ದೆ ಸೃಷ್ಟಿ ಮಾಡಲಾಗಿದೆ. ಕಾಂಗ್ರೆಸ್ ನಲ್ಲಿ ಒಳ ಜಗಳ ನಡೆಯುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಗ್ಯಾರಂಟಿ ನಿಲ್ಲಿಸಿ ಅಂತ, ಮತ್ತೆ ಕೆಲವರು ಅಭಿವೃದ್ದಿಗೆ ಹಣ ಕೊಡುತ್ತಿಲ್ಲ ಆದ್ದರಿಂದ ಸಿದ್ದರಾಮಯ್ಯ ಹೋಗಬೇಕು ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೇವಸ್ಥಾನಗಳಿಗೆ ಮೊರೆ ಹೋಗಿ ಸಿಎಂ ಆಗಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದಲ್ಲದೆ ಇವೆಲ್ಲಾ ನೋಡಿದರೆ ಕೇಂದ್ರದಲ್ಲಿ ಸಿದ್ಧರಾಮಯ್ಯನವರಿಗೆ ಅಧಿಕಾರವಿಲ್ಲ. ಸಿದ್ದರಾಮಯ್ಯ ಸಿಎಂ ಆಗಿ ೭ ವರ್ಷವಿದ್ದು ಏನು ಮಾಡಿಲ್ಲ, ರಾಷ್ಟ್ರೀಯ ಪದವಿ ತೆಗೆದುಕೊಂಡು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರಲ್ಲದೆ ಸಿಎಂ ಪದವಿಯಿಂದ ತೆಗೆಯಲು ಹುದ್ದೆ ಕೊಡುತ್ತಿದ್ದಾರೆ ಎಂದರು.
ಇನ್ನು ಬಿಜೆಪಿ ರೆಬಲ್ ಮುಖಂಡರ ಕುರಿತು ಮಾತನಾಡಿ, ಹೈಕಮಾಂಡ್ ಸ್ಟ್ರಾಂಗ್ ಇದೆ. ಮುಂದೆ ಎಲ್ಲವೂ ಸರಿ ಹೋಗುತ್ತೆ ಎಂದು ತಿಳಿಸಿದರಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ. ವಿಜಯೇಂದ್ರ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ಹೇಳುತ್ತಿದ್ದಾರೆ. ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಚಿತ್ರ ೦೮ ಕೆ.ಎಲ್.ಆರ್. ೦೬ : ಪಿ.ಸಿ.ಮೋಹನ್ ಭಾವಚಿತ್ರ