ನ್ಯೂಸ್

ಸಿದ್ದುಗೆ ಇಲ್ಲ ಬದ್ಧತೆ

ಚಿತ್ರದುರ್ಗ: ಜೆಡಿಎಸ್‌ನಲ್ಲಿದ್ದ ಸಂದರ್ಭ ಸೋನಿಯಾ ಗಾಂಧಿ ಅವರನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಸಿದ್ದರಾಮಯ್ಯ, ಕೊನೆಗೆ ಅವರ ಕಾಲಿಗೆ ಬಿದ್ದು ಕಾಂಗ್ರೆಸ್ ಸೇರ್ಪಡೆಗೊಂಡು ಮುಖ್ಯಮಂತ್ರಿ ಪಟ್ಟ ಗಳಿಸಿದರು ಎಂದು ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ದೂರಿದರು.

ಗುರುವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ರಾಜಕೀಯವಾಗಿ ಬೆಳೆಸಿದ ದೇವೇಗೌಡರ ವಿರುದ್ಧ ಟೀಕೆ ಮಾಡುತ್ತಿರುವ ಸಿದ್ದರಾಮಯ್ಯ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಏಕವಚನದಲ್ಲಿ ಸಂಬೋಧಿಸಿದರು ಎಂದ ಅವರು, ಸಂವಿಧಾನದ ಕುರಿತು ಮಾತನಾಡುವ ಕಾಂಗ್ರೆಸ್ ನಾಯಕರು ಬುಡಕಟ್ಟು ಮಹಿಳೆಗೆ ಕೊಡುವ ಗೌರವ ಇದೇನಾ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ದೈವಾಂಶ, ದೈವ ಕೃಪೆ ಇದೆ ಎಂಬ ಭಾವನೆ ಅನೇಕ ಭಾರತೀಯರಲ್ಲಿದೆ. ವಿಶ್ವವೇ ಅವರನ್ನು ಕೊಂಡಾಡುವ ದಿನ ಖಂಡಿತ ಬರಲಿದೆ ಎಂದರು.