ನ್ಯೂಸ್

ಸಿದ್ದರಾಮಯ್ಯ ಕೊಡವರ ಕ್ಷಮೆಯಾಚಿಸಬೇಕು: ರವಿ ಚಂಗಪ್ಪ

ಸಿದ್ದರಾಮಯ್ಯ ಗೋಮಾಂಸ ತಿನ್ನಬೇಕಾದ್ರೆ ಮತಾಂತರವಾಗಲಿ. ಹಿಂದು ಧರ್ಮದಲ್ಲಿ ಸಿದ್ದರಾಮಯ್ಯ ಇರೋದು ಬೇಡ ಎಂದು ರವಿ ಚಂಗಪ್ಪ ಕಿಡಿಕಾರಿದ್ದಾರೆ.

ಟಿಪ್ಪು ಜಯಂತಿ ಮೂಲಕ ಕೊಡವರ ಆಕ್ರೋಶಕ್ಕೆ ಗುರಿಯಾಗಿದ್ದ ಸಿದ್ದರಾಮಯ್ಯ, ಇದೀಗ ಮತ್ತೆ ಕೊಡವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೊಡವರು ಗೋವನ್ನು ಪೂಜ್ಯನೀಯ ದೃಷ್ಟಿಯಿಂದ ಕಾಣುತ್ತಾರೆ. ಕೊಡಗಿನಲ್ಲಿ ಗೋಹತ್ಯೆ, ಗೋಮಾಂಸ ಭಕ್ಷಣೆ ನಿಷೇಧವಿದೆ. ಬ್ರಿಟೀಷರ ಕಾಲದಿಂದಲೂ ಈ ನಿಯಮ ಜಾರಿಯಿದೆ. ಹೀಗಿರುವಾಗ ಕೊಡವರು ಗೋಮಾಂಸ ತಿನ್ನುತ್ತಾರೆ ಅನ್ನೋದು ತಪ್ಪು. ಸಿದ್ದರಾಮಯ್ಯ ತನ್ನ ಹೇಳಿಕೆ ಹಿಂಪಡೆಯಲಿ. ಕೊಡವರ ಕ್ಷಮೆ ಕೋರದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ರವಿ ಚಂಗಪ್ಪ ಹೇಳಿದ್ದಾರೆ.

ಮಡಿಕೇರಿ: ಕೊಡವರು ಗೋಮಾಂಸ ತಿನ್ನುತ್ತಾರೆಂಬ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಕೊಡವರ ಕ್ಷಮೆ ಕೇಳಬೇಕು ಎಂದು ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಆಗ್ರಹಿಸಿದ್ದಾರೆ.