ಜಮಖಂಡಿ: ಸಿದ್ದರಾಮೋತ್ಸವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಕಾಂಗ್ರೆಸ್ಗೆ "ಕೊನೆಗಾಲ ಉತ್ಸವ' ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಉಪಮುಖ್ಯಮಂತ್ರಿ ಸವದಿ ಟೀಕಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಈಗಾಗಲೇ ಗುದ್ದಾಟ ಆರಂಭವಾಗಿದೆ. ಕಾಂಗ್ರೆಸ್ ನಾಯಕರು ಕೂಸು ಹುಟ್ಟುವುದಕ್ಕಿಂತ ಮುಂಚೆಯೇ ಕುಲಾವಿ ಹೊಲಿಸುವ ಕಾರ್ಯ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಈಗಾಗಲೇ ಅಧಿ-ಕಾರ ಅನುಭವಿಸಿದ್ದಾರೆ. ಅವರ ಪದಲ್ಲೇ ಸಿಎಂ ಆಗಬಾರದು ಎಂಬ ಅಪಸ್ವರ ಎದ್ದಿವೆ. ಡಿ.ಕೆ. ಶಿವಕುಮಾರ ಅವರೂ ತಾನು ಮುಖ್ಯಮಂತ್ರಿ ಆಗಬೇಕು ಎನ್ನುತ್ತಾರೆ. ಮಲ್ಲಿಕಾರ್ಜುನ ರ್ಖಗೆ ಅವರೂ ಸಿಎಂ ಆಗಿ ನಿವೃತ್ತಿ ಆಗಬೇಕು ಎಂಬ ಆಸಕ್ತಿ ಹೊಂದಿದ್ದಾರೆ. ದಲಿತ ನಾಯಕ ಎಚ್.ಸಿ. ಮಹಾದೇವಪ್ಪ ಸೇರಿದಂತೆ ಅವರ ಹಲವಾರು ನಾಯಕರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಾನು ಪದ ಶಿಸ್ತಿನ ಸಿಪಾಯಿ. ನಾನು ಜಮಖಂಡಿ ೇತ್ರದಿಂದ ಸ್ಪ-ರ್ಧಿಸುವ ಬಗ್ಗೆ ಏನೂ ಗೊತ್ತಿಲ್ಲ. ಪದ ವರಿಷ್ಠರು ಎಲ್ಲಿ ಹೇಳುತ್ತಾರೋ ಅಲ್ಲಿ ನಾನು ಖಂಡಿತವಾಗಿಯೂ ಸ್ಪರ್ಧೆ ಮಾಡುತ್ತೇನೆ ಎಂದು ಲಕ್ಷ$್ಮಣ ಸವದಿ ತಿಳಿಸಿದರು. ಬಳಿಕ ಅವರು ಜಮಖಂಡಿ ನಗರದ ಮುಸ್ಲಿಂ ಪ್ರಮುಖ ನಾಯಕ, ನಗರಸಭೆ ಮಾಜಿ ಸದಸ್ಯ, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ತೌಫೀಕ್ ಪಾರ್ಥನಳ್ಳಿ ಅವರ ನಿವಾಸಕ್ಕೆ ಲಕ್ಷ$್ಮಣ ಸವದಿ ಭೇಟಿ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಯಿತು.
ಕಾಡು ಮಾಳಿ, ತೌಫೀಕ್ ಪಾರ್ಥನಳ್ಳಿ, ಸಂಜು ತೇಲಿ, ಭೀಮಶಿ ಮಾಚಕನೂರ, ಸೂರಜ್ ಕುಡ್ರಾನಿ, ಪರಶುರಾಮ ಕಾಂಬಳೆ, ಉಸ್ಮಾನ್ ಜಹಗೀರದಾರ, ಅಶ್ರ್ ಪಠಾಣ್ ಇತರರಿದ್ದರು.