ಔರಾದ್: ಸಂತಪುರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ)ಯಾಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದ ಈಮಲಪ್ಪ ಡಿ.ಕೆ. ವರ್ಗಾವಣೆ ರದ್ದುಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಕÊಷ್ಣಪ್ಪ ಬಣ) ಆಗ್ರಹಿಸಿದೆ.
ಪಟ್ಟಣದಲ್ಲಿ ಶುಕ್ರವಾರ ಸಂಸದ ಸಾಗರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿ, ಎಂಟು ತಿಂಗಳಿAದ ಶಿಶು ಅಭಿವÊದ್ಧಿ ಯೋಜನಾಧಿಕಾರಿಯಾಗಿ ಈಮಲಪ್ಪ ಡಿ.ಕೆ. ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅವರನ್ನು ರಾಜಕೀಯ ಕುತಂತ್ರದಿAದ ವರ್ಗಾವಣೆ ಮಾಡಿದ್ದು ಖಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಸಂತಪುರ ಸಿಡಿಪಿಒ ಕಚೇರಿಯ ಕೆಲವರ ರಾಜಕೀಯ ಕುತಂತ್ರದಿAದ ದP್ಷÀ ಅಧಿಕಾರಿ ಈಮಾಲಪ್ಪ ಅವರ ವರ್ಗಾವಣೆ ಮಾಡಲಾಗಿದೆ. ಕೂಡಲೇ ಈಮಲಪ್ಪ ಅವರನ್ನು ಅದೇ ಸ್ಥಳಕ್ಕೆ ನಿಯೋಜನೆ ಮಾಡಬೇಕು. ನಿರ್ಲP್ಷÀ್ಯ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರೆ, ಪ್ರಮುಖರಾದ ತುಕಾರಾಮ ಹಸನ್ಮುಖಿ, ಸತೀಶ್ ವಗ್ಗೆ, ಘಾಳೆಪ್ಪ, ಸಂಜೀವಕುಮಾರ ಇತರರು ಒತ್ತಾಯಿಸಿದ್ದಾರೆ.