ನ್ಯೂಸ್

ಸಿಎಂ ಭೇಟಿ ಮಾಡಲು ಆಂಟಿಜನ್ ಪರೀಕ್ಷೆ ಕಡ್ಡಾಯ ನೆಗೆಟಿವ್ ಬಂದರೆಷ್ಟೇ ಭೇಟಿಗೆ ಅವಕಾಶ!

ನೆಗೆಟಿವ್ ಬಂದರೆಷ್ಟೇ ಭೇಟಿಗೆ ಅವಕಾಶ!

ಕೃಷ್ಣಾ, ಕಾವೇರಿ ಯಲ್ಲಿ ಆಂಟಿಜನ್ ಪರೀಕ್ಷಾ ವ್ಯವಸ್ಥೆ

ಸಿಎಂ ಭೇಟಿ ಮಾಡಲು ಆಂಟಿಜನ್ ಪರೀಕ್ಷೆ ಕಡ್ಡಾಯ

ಆದರೆ, ಈ ನಿಯಮ ಸಿಎಂ ಭೇಟಿ ಮಾಡಲು ಬರುವ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. ಅಧಿಕಾರಿಗಳು ವಾರಕ್ಕೊಮ್ಮೆ ಕರೊನಾ ಪರೀಕ್ಷೆಗೆ ಒಳಪಡುವುದರಿಂದ ಅವರು ಪ್ರತಿ ದಿನ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ವಿವಿಧ ನಿಯೋಗಗಳಲ್ಲಿ ಬರುವವರಲ್ಲಿ ಕರೊನಾ ಸೋಂಕಿತರು ಇರಬಹುದಾದ ಹಿನ್ನೆಲೆಯಲ್ಲಿ ಆಂಟಿಜೆನ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಮತ್ತು ಅಧಿಕೃತ ನಿವಾಸ ಕಾವೇರಿಯಲ್ಲಿ ಆಂಟಿಜನ್ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಮಾತ್ರ ಸಿಎಂ ಭೇಟಿಗೆ ಅವಕಾಶ ನೀಡಲಾಗುತ್ತದೆ. ಪಾಸಿಟಿವ್ ಬಂದರೆ ಭೇಟಿಗೆ ಅವಕಾಶವಿಲ್ಲ. ಅಲ್ಲದೆ, ಪಾಸಿಟಿವ್ ಬಂದವರನ್ನು ಆರ್‌ಟಿಪಿಸಿಎಆರ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪರೀಕ್ಷೆಯಲ್ಲೂ ಪಾಸಿಟಿವ್ ಬಂದಲ್ಲಿ ಅಂತಹವರನ್ನು ಆಸ್ಪತ್ರೆಗೆ ಕಳುಹಿಸುವ ಏರ್ಪಾಡು ಮಾಡಲಾಗಿದೆ.

ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಉಪಕ್ರಮ ಕೈಗೊಳ್ಳಲಾಗಿದೆ.

ಇನ್ನು ಯಾರೂ ನೇರವಾಗಿ ಮುಖ್ಯಮಂತ್ರಿ ಭೇಟಿ ಮಾಡುವಂತಿಲ್ಲ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಬರುವ ಸಾರ್ವಜನಿಕರು ಹಾಗೂ ನಿಯೋಗಗಳು ಆಂಟಿಜೆನ್ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ವಿಜಯವಾಣಿ ಸುದ್ದಿಜಾಲ ಬೆಂಗಳೂರು