ನ್ಯೂಸ್

ಸಾಹಿತ್ಯ, ಭಾಷೆ ಯಾರಿಗೂ ಬೇಡದ ವಿಷಯಗಳಾಗಿವೆ/ ಸಾಹಿತ್ಯ ಕಟ್ಟುವ, ಪ್ರೋತ್ಸಾಹಿಸುವ ಕೆಲಸ ಮಾಡದಿದ್ದರೆ ನಮ್ಮನ್ನು ಇತಿಹಾಸ ಕ್ಷಮಿಸದು/ ಪುರುಷೋತ್ತಮ ಬಿಳುಮಲೆ

ವಿಜಯವಾಣಿ ಸುದ್ದಿಜಾಲ Pಕೋಲಾರ

ಸಾಹಿತ್ಯ, ಭಾಷೆ ಇಂದು ಯಾರಿಗೂ ಬೇಡದ ವಿಷಯಗಳಾಗಿವೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಾಹಿತ್ಯ ಕಟ್ಟುವ, ಪ್ರೋತ್ಸಾಹಿಸುವ ಕೆಲಸ ಮಾಡದಿದ್ದರೆ ನಮ್ಮನ್ನು ಇತಿಹಾಸ ಕ್ಷಮಿಸದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳುಮಲೆ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಓದುಗ ಕೇಳುಗ ನಮ್ಮ ನಡೆ ಬಳಗ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸಿರಿಗನ್ನಡ ಪುಸ್ತಕ ಮಳಿಗೆ ಆಶ್ರಯದಲ್ಲಿ ನಡೆದ ೫೦ನೇ ತಿಂಗಳ ಸಾಹಿತ್ಯ ಸಂಭ್ರಮ-ಸAವೇದನೆ ಸಂವಹನ ಕೃತಿ ಬಿಡುಗಡೆ ಮಾಡಿ ಮಾತನಾಡಿ ಪತನಮುಖಿ ಆಗಿರುವ ಭಾಷೆಗೆ ಊರುಗೋಲಾಗಿ ಓದುಗ ಕೇಳುಗದಂತಹ ಕಾರ್ಯಕ್ರಮಗಳು ಎಲ್ಲಾ ಜಿಲ್ಲೆಗಳಲ್ಲೂ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ನಮ್ಮ ಕೃತಿಗಳಿಗೆ ಓದುಗ ಕೇಳುಗನ ಜೊತೆ ನೋಡುಗನನ್ನೂ ಕಂಡುಕೊಳ್ಳುವತ್ತ ಚಟುವಟಿಕೆ ವಿಸ್ತರಣೆಯಾಗಬೇಕು. ವರ್ತಮಾನದ ರಾಜಕಾರಣ ನಮ್ಮ ಪಠ್ಯಗಳ ಮೇಲೆ ಆಕ್ರಮಣ ಮಾಡುತ್ತಿವೆ. ಈ ನಿಟ್ಟಿನಲ್ಲಿ ಅರಿವು ವಿಸ್ತಾರವಾಗಬೇಕಿದೆ ಎಂದು ಹೇಳಿದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ ಮಾತನಾಡಿ ಸಂವೇದನೆ-ಸAವಹನ ಪುಸ್ತಕ ಮೌಲಿಕ ಕೃತಿ ಮತ್ತು ಓದುಗ ಕೇಳುಗ-ನಮ್ಮ ನಡೆ ಅತ್ಯುತ್ತಮ ಪರಿಕಲ್ಪನೆಯಾಗಿದೆ. ಸಾಮಾಜಿಕ ಕಾಲಘಟ್ಟದಲ್ಲಿ ನಿಜವಾದ ಮೌಲಿಕ ಸಾಹಿತ್ಯಕ ಕೃತಿಗಳು ಹಿಂದೆ ಸರಿಯುತ್ತಿವೆ ಎಂದು ವಿಷಾದಿಸಿದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ ವಿ ಗೋಪಿನಾಥ್ ಮಾತನಾಡಿ ಜ್ಞಾನಧಾರೆಯ ಭಾಗವಾಗಬೇಕಾದ ಶಿಕ್ಷಣವು ಇವತ್ತು ಹೊಟ್ಟೆಪಾಡಿನ ಮಾನದಂಡವಾಗಿರುವುದೇ ಓದುವ ಬರೆಯುವ ಸಂಸ್ಕೃತಿಗೆ ಮಾರಕವಾಗಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯು ಅನಿವಾರ್ಯ ಎಂದು ತಿಳಿಸಿದರು.

ಉಪನ್ಯಾಸಕ ಜೆ.ಜಿ.ನಾಗರಾಜ್ ಮಾತನಾಡಿ ಸಣ್ಣ ಸಾಹಿತ್ಯ ಸಮ್ಮೇಳನದಂತೆ ೫೦ ತಿಂಗಳುಗಳಿAದ ಓದುಗ ಕೇಳುಗ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಯುವ ಪೀಳಿಗೆ ಆಕರ್ಷಿತಗೊಳ್ಳದಿರುವುದು ವಿಷಾದನೀಯ ಎಂದರು.

ನಿವೃತ್ತ ಪ್ರಾಧ್ಯಾಪಕ ಹಾಗೂ ಕೃತಿಯ ಸಂಪಾದಕ ಎಂ.ಮುನಿರತ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಓದುಗ ಕೇಳುಗ ನಮ್ಮ ನಡೆ ಬಳಗದ ಎಚ್.ಎ.ಪುರುಷೋತ್ತಮ ರಾವ್, ಹಾ.ಮ.ರಾಮಚಂದ್ರ, ಆದಿಮ ಗೋವಿಂದಪ್ಪ, ಸಿ.ಎ. ರಮೇಶ್, ನೇತ್ರಾವತಿ ಉಪಸ್ಥಿತರಿದ್ದರು.

ಚಿತ್ರ ೦೧ ಕೆ.ಎಲ್.ಆರ್. ೦೧ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಓದುಗ ಕೇಳುಗ ನಮ್ಮ ನಡೆ ಕಾರ್ಯಕ್ರಮದ ೫೦ನೇ ತಿಂಗಳ ಸಾಹಿತ್ಯ ಸಂಭ್ರಮ-ಸAವೇದನೆ ಸಂವಹನ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳುಮಲೆ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ ಮುಂತಾದವರಿದ್ದರು.