ಹೊಳೆಹೊನ್ನೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಸಾಹಿತಿ ನಾ.ಡಿಸೋಜ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ಕೋಗಲೂರು ತಿಪ್ಪೇಸ್ವಾಮಿ, ಎಚ್.ಬಿ.ಶ್ರೀನಿವಾಸ್, ಎಸ್.ಎಚ್. ಹನುಮಂತಪ್ಪ, ಮಂಜಪ್ಪ, ಟಿ.ಎಂ.ಸಂಗಪ್ಪ, ಜಗದೀಶ್ ಇತರರಿದ್ದರು. 
ನ್ಯೂಸ್

ಸಾಹಿತಿ ನಾ.ಡಿಸೋಜ ಜೀವನಶೈಲಿ ಆದರ್ಶ

ಹೊಳೆಹೊನ್ನೂರು: ಸರಳ ಸಜ್ಜನಿಕೆಯ ಕನ್ನಡದ ಮೇರು ಸಾಹಿತಿ ನಾ.ಡಿಸೋಜ ಅವರ ಜೀವನಶೈಲಿ ಇತರರಿಗೆ ಆದರ್ಶ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.

ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಸೋಮವಾರ ನಡೆದ ಸಾಹಿತಿ ನಾ.ಡಿಸೋಜ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತ್ಯದ ಮೂಲಕ ಅನೇಕ ಪರಿಸರ, ಜನಪರ ಹೋರಾಟದಲ್ಲಿ ತೊಡಗಿಕೊಂಡು ಯಶಸ್ಸು ಕಂಡಿದ್ದರು. ನಾ.ಡಿಸೋಜ ಅವರ ಅನೇಕ ಕೃತಿಗಳು ಚಲನಚಿತ್ರ, ಧಾರವಾಹಿ, ನಾಟಕಗಳಾಗಿ ಸಾಮಾಜಿಕ ಪರಿವರ್ತನೆ ಮಾಡಿಕೊಟ್ಟಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಕುವೆಂಪು ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್, ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಡಳಿತ ಪರಿಷತ್‌ಮುಂತಾದ ಸಂಸ್ಥೆಗಳಲ್ಲಿ ಸದಸ್ಯರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿ ಆದರ್ಶ ಮಾರ್ಗದರ್ಶಕರಾಗಿದ್ದರು ಎಂದರು.

ಹೋಬಳಿ ಕಸಾಪ ಘಟಕದ ಪದಾಧಿಕಾರಿಗಳಾದ ಎಚ್.ಬಿ.ಶ್ರೀನಿವಾಸ್, ಎಸ್.ಎಚ್.ಹನುಮಂತಪ್ಪ, ಸಿಆರ್‌ಪಿ ಮಂಜಪ್ಪ, ಟಿ.ಎಂ.ಸಂಗಪ್ಪ, ತಾಲೂಕು ಘಟಕದ ಜಗದೀಶ್ ಮಾತನಾಡಿದರು.

ಹೋಬಳಿ ಕಸಾಪ ಘಟಕದ ಅಧ್ಯಕ್ಷ ಎಸ್.ಬಿ.ಸಿದ್ದಪ್ಪ, ಕೂಡ್ಲಿಗೆರೆ ಹೋಬಳಿ ಘಟಕದ ಅಧ್ಯಕ್ಷ ರವಿ, ಸಿ.ಮೂರ್ತಿ, ಯು.ಕೆ.ರಮೇಶ್, ಎಮ್ಮೆಹಟ್ಟಿ ಆರ್.ಮಂಜುನಾಥ್, ಅಗಸನಹಳ್ಳಿ ಡಿ.ಕುಬೇಂದ್ರಪ್ಪ, ಹೊಳೆಬೈರನಹಳ್ಳಿ ನಾಗರಾಜ್ ಇದ್ದರು. ಹೋಬಳಿ ಘಟಕದ ಕಾರ್ಯದರ್ಶಿ ಹಾಗೂ ಶಿಕ್ಷಕ ಒ.ಚಂದ್ರಪ್ಪ ಕಾರ್ಯಕ್ರಮ ನಿರ್ವಹಣೆ ಮಾಡಿದರು.