ನ್ಯೂಸ್

ಸಾಲಬಾಧೆ ತಾಳದೆ ಇಜೇರಿ ಗ್ರಾಮದ ಯುವ ರೈತ ಆತ್ಮಹತ್ಯೆ


ಯಡ್ರಾಮಿ (ಕಲಬುರಗಿ): ಸಾಲಬಾಧೆ ತಾಳಲಾರದೆ ಯುವ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಇಜೇರಿ ಗ್ರಾಮದಲ್ಲಿ ಬುಧವಾರ ಜರುಗಿದೆ. ಸಿದ್ದಣ್ಣ ನಿಂಗಣ್ಣ ನೀರಲಕೋಡ (೩೦) ಆತ್ಮಹತ್ಯೆಗೆ ಶರಣಾದ ರೈತ. ೯ ಎಕರೆ ಜಮೀನಿದ್ದು, ಕಳೆದ ೨-೩ ವರ್ಷಗಳಿಂದ ಸಮರ್ಪಕವಾಗಿ ಫಸಲು ಬಾರದಿರುವುದರಿಂದ ಬೇಸತ್ತಿದ್ದ. ಕೃಷಿಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ೭ ಲಕ್ಷ ರೂ. ಹಾಗೂ ಖಾಸಗಿಯಲ್ಲಿ ೫ ಲಕ್ಷ ರೂ. ಸಾಲ ಮಾಡಿದ್ದ. ಬುಧವಾರ ಜಮೀನಿನಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.